ಶಿವಮೊಗ್ಗ: ಸಿಗಂದೂರು ಚೌಡೇಶ್ವರಿ ದೇವಾಲಯದ ಬಳಿಯ ಹಿನ್ನೀರಿನಲ್ಲಿ ಶರಾವತಿ-1 ಮತ್ತು ಶರಾವತಿ -2 ಲಾಂಚ್​​ಗಳು​ ಮುಖಾಮುಖಿ ಡಿಕ್ಕಿಯಾಗಿವೆ. ಚಾಲಕರ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್​​ ಕೂದಲೆಳೆ ಅಂತರದಲ್ಲಿ 500ಕ್ಕೂ ಹೆಚ್ಚು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ಇವು ಒಳನಾಡು ಬಂದರು ಇಲಾಖೆಗೆ ಸೇರಿದ ಲಾಂಚ್​​ಗಳಾಗಿದ್ದು, ಚಾಲಕರ ನಿರ್ಲಕ್ಷ್ಯಕ್ಕೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಾಂಚ್​ ಚಲಾಯಿಸುತ್ತಿದ್ದ ಸುನಿಲ್​, ಕಳಸವಳ್ಳಿ ದಡದಿಂದ ಬರುತ್ತಿದ್ದ ಲಾಂಚ್​​ಗೆ ಗುದ್ದಿದ್ದಾನೆ. ಲಾಂಚ್​ಗಳನ್ನು ಚಲಾಯಿಸುತ್ತಿದ್ದ ಸುನಿಲ್ ಮತ್ತು ಮಂಜಪ್ಪ ಇಬ್ಬರೂ ಅನಧಿಕೃತ ಡ್ರೈವರ್​ಗಳು ಅಂತ ತಿಳಿದುಬಂದಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.