ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಎರಡೂ ಪಕ್ಷವನ್ನ ಸೋಲಿಸೋವರೆಗೂ ವಿಶ್ರಾಂತಿ ಪಡೆದುಕೊಳ್ಳುವುದಿಲ್ಲ ಎಂದು ಶರದ್​ ಪವಾರ್​ ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಕೋಲಾದಲ್ಲಿ ಪಬ್ಲಿಕ್​ ರ‌್ಯಾಲಿ ನಡೆಸಿ ಮಾತನಾಡಿದ ಅವರು, ಕೆಲವರು ಈ ವಯಸ್ಸಿನಲ್ಲೂ ಅಭಿಯಾನ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. ಈ ವಯಸ್ಸಲ್ಲೂ ಪಾರ್ಟಿ ಪ್ರೆಸಿಡೆಂಟ್​ ಆಗಿದ್ದಾರೆ ಎಂದು ಗೇಲಿ ಮಾಡಿದ್ದಾರೆ. ಇನ್ನೊಮ್ಮೆ ಈ ರೀತಿ ಹೇಳಬೇಡಿ. ನಿಮ್ಮ ಪಕ್ಷದ ಮುಖ್ಯಸ್ಥನಾಗಿದ್ದೀನಿ. ನಾನು ಈಗಲೂ ಕೂಡ ಚಿರಯುವಕ. ನೀವು ಮನೆ ತಲುಪಿದ ಮೇಲೆಯೇ ನಾನು ಮನೆಗೆ ತೆರಳುವುದು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.