ಕ್ರಿಕೆಟಿಗ ಮುಹಮ್ಮದ್ ಶಮಿಗೆ ಗರ್ಲ್ ಫ್ರೆಂಡ್ – ಪತ್ನಿ ಗಂಭೀರ ಆರೋಪ

ಮುಂಬೈ: ಭಾರತ ತಂಡದ ವೇಗದ ಬೌಲರ್ ಶಮಿ ಇದೀಗ ವ್ಯಭಿಚಾರ ಮತ್ತು ಹೆಂಡತಿಯ ಮೇಲೆ ದೌರ್ಜನ್ಯವೆಸಗುತ್ತಿರುವ ಆರೋಪಕ್ಕೆ ತುತ್ತಾಗಿದ್ದಾರೆ. ತನ್ನ ಪತಿ ಮುಹಮ್ಮದ್ ಶಮಿ ಗರ್ಲ್ಫ್ ಫ್ರೆಂಡ್ ಹೊಂದಿದ್ದಾರೆಂದು ಹಸಿನ್ ಜಹಾನ್ ಗಂಭೀರ ಆರೋಪ ಮಾಡಿದ್ದಾರೆ.

ಬಹಳಷ್ಟು ಮಹಿಳೆಯೊರೊಂದಿಗೆ ಸಮಿ ಸಂಬಂಧ ಹೊಂದಿದ್ದಾರೆಂದು ಆರೋಪಿಸಿರುವ ಜಹಾನ್, ಫೇಸ್ ಬುಕ್ ಸ್ಕ್ರೀನ್ ಶಾಟ್ ಗಳನ್ನು ಪ್ರಕಟಿಸಿದ್ದಾರೆ. ಅದಲ್ಲದೆ ಮುಹಮ್ಮದ್ ಶಮಿ ಮನೆಯವರು ನನ್ನನ್ನು ಹಿಂಸಿಸುತ್ತಾರೆ. ಅದರೊಂದಿಗೆ ಶಮಿ ಕೂಡ ನನ್ನ ಮೇಲೆ ದೈಹಿಕ ದೌರ್ಜನ್ಯವೆಸಗುತ್ತಾರೆಂದು ಆರೋಪಿಸಿದ್ದಾರೆ.

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಮಿ, ಇದೊಂದು ನನ್ನ ಮೇಲೆ ನಡೆಸಿರುವ ಷಡ್ಯಂತ್ರವಾಗಿದೆ. ನನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಬಂದಿರುವ ಆರೋಪ ಸುಳ್ಳೆಂದು ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.