ಉಡುಪಿ: ಇಂದು ವಿಶ್ವ ಆತ್ಮಹತ್ಯಾ ತಡೆವಾದ ಹಿನ್ನಲೆ ಬಿಜೆಪಿ ಶಾಸಕರೊಬ್ಬರು ಆತ್ಮಹತ್ಯೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಉಡುಪಿಯಲ್ಲಿ ಮಾತನಾಡಿರುವ ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌, ಇತ್ತೀಚೆಗಷ್ಟೇ ರಾಜೀನಾಮೆ ನೀಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹಾಗೆ ಮನಸ್ಥಿತಿಯುಳ್ಳವರು ಮುಂದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದೀತು ಎಂದಿದ್ದಾರೆ.ಉಡುಪಿಯ ಕಿದಿಯೂರಿನ ಶೇಷಶಯನ ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸುನಿಲ್ ಕುಮಾರ್‌ ಈ ಮಾತುಗಳನ್ನಾಡಿದ್ದಾರೆ “ಕೇಂದ್ರ ಸರಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲಿದೆ, ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡಿಸಲಿದ್ದು ಕೇಂದ್ರದ ನಿಲುವು ವಿರೋಧಿಸುವ ದಕ್ಷಿಣ ಕನ್ನಡದ ನಿರ್ಗಮಿತ ಜಿಲ್ಲಾಧಿಕಾರಿಯಂತಹ (ಸಸಿಕಾಂತ್ ಸೆಂಥಿಲ್) ಮನಸ್ಥಿತಿಯುಳ್ಳವರು ಮುಂದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗಬಹುದು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.