ಲಡಾಕ್: ಪ್ಯಾಂಗ್ ಕೋಕ್ ಕೆರೆಯ ಬಳಿ ಉಭಯ ದೇಶದ ಸೈನಿಕರು ಬುಧವಾರ ಗಸ್ತು ತಿರುಗುತ್ತಿದ್ದ ಘಟನೆ ಸಂಭವಿಸಿದ್ದು ಅಧಿಕಾರಿಗಳ ಮಾತುಕತೆಯ ನಂತರ ಸುಖಾಂತ್ಯ ಕಂಡಿದೆ.

ಗಡಿ ರೇಖೆಯ ತಕರಾರಿನಿಂದಾಗಿ ಈ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಈ ಮೊದಲು 2017 ರಲ್ಲೂ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು.

ಗಸ್ತು ತಿರುಗುತ್ತಿದ್ದ ಭಾರತೀಯ ಸೈನಿಕರನ್ನು ಚೈನಾ ಸೈನಿಕರು ಗಡಿ ರೇಖೆಯ ವಿಚಾರದಲ್ಲಿ ತಡೆದಾಗ ಇಬ್ಬರು ಎರಡು ಕಡೆಯಿಂದ ನಿಂತಲ್ಲೆ ನಿಂತಿದ್ದಾರೆ. ನಂತರ ಪ್ರತಿನಿಧಿಗಳ ಮಾತುಕತೆಯ ಮುಖಾಂತರ ಎಲ್ಲವೂ ಸರಿ ಹೋಗಿದೆಯೆಂದು ಸೈನ್ಯ ಮೂಲಗಳು ತಿಳಿಸಿರುವ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.