ನನ್ನ ಪೌರತ್ವ ಸಾಬೀತು ಪಡಿಸಲು ದಾಖಲೆ ಸಲ್ಲಿಸುವುದಿಲ್ಲ – ಮಸೂದೆ ವಿರುದ್ಧ ಸಿಡಿದೆದ್ದ ಮಾಜಿ ದ.ಕ ಜಿಲ್ಲಾಧಿಕಾರಿ ಸಸಿಕಾಂಥ್ ಸೆಂಥಿಲ್

0
194

ಮಂಗಳೂರು: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಅಮಿತ್ ಶಾಗೆ ತೀಕ್ಷ್ಣವಾದ ಪತ್ರ ಬರೆದ ಮಾಜಿ ಐ.ಎ.ಎಸ್ ಅಧಿಕಾರಿ ಸಸಿಕಾಂಥ್ ಸೆಂಥಿಲ್, ತನ್ನ ಪೌರತ್ವ ಸಾಬೀತು ಪಡಿಸಲು ಯಾವುದೇ ರೀತಿಯ ದಾಖಲೆ ಸಲ್ಲಿಸುವುದಿಲ್ಲವೆಂದು ಹೇಳಿದ್ದಾರೆ.

ಸಿಎಬಿ(ಪೌರತ್ವ ಮಸೂದೆ) ಅಂಗೀಕಾರವಾದ ದಿನ “ಆಧುನಿಕ ಭಾರತದ ಇತಿಹಾಸದಲ್ಲಿ ಕರಾಳ ದಿನವಾಗಿದೆ.ತಾನು ಪೌರತ್ವ ಮಸೂದೆಯನ್ನು ಸ್ವೀಕರಿಸುವುದಿಲ್ಲ, ಭಾರತೀಯನೆಂದು ಪೌರತ್ವವನ್ನು ಸಾಬೀತುಪಡಿಸಲು ಅಗತ್ಯವಾದ ದಾಖಲೆಗಳನ್ನು ಸಲ್ಲಿಸುವುದಿಲ್ಲ ಮತ್ತು ನನ್ನ ಅಸಹಕಾರಕ್ಕಾಗಿ ಭಾರತ ದೇಶವು ನನ್ನ ಮೇಲೆ ಕ್ರಮ ಕೈಗೊಂಡರೆ ಸ್ವೀಕರಿಸುತ್ತೇನೆ. ಎಂದು ಸೆಂಥಿಲ್ ಹೇಳಿದ್ದಾರೆ.

ಈ ದೇಶದಲ್ಲಿ ಹುಟ್ಟಿ ಬೆಳೆದು ನಾನು ನನ್ನ ಪೌರತ್ವ ಸಾಬೀತುಪಡಿಸಬೇಕಾಗಿರುವುದು ದುರಾದೃಷ್ಟಕರ. ನನ್ನ ಪೌರತ್ವವನ್ನು ಸಾಬೀತುಪಡಿಸಲು ಅಗತ್ಯವಾದ ದಾಖಲೆಗಳನ್ನು ಸಲ್ಲಿಸದೆ ಎನ್ಆರ್ ಸಿ ಗಣತಿಗೆ ಅಸಹಕಾರ ನೀಡುತ್ತೇನೆ. ಒಂದುವೇಳೆ ನಾನು ಈ ದೇಶದ ನಾಗರೀಕನಲ್ಲ ಎಂದು ಗುರುತಿಸಿದರೆ ನೀವು ನಿರ್ಮಿಸುತ್ತಿರುವ ಅನೇಕ “ವಲಸೆ ಕೇಂದ್ರ” ಭರ್ತಿ ಮಾಡಲು ನನಗೆ ಸಂತೋಷವಾಗುತ್ತದೆ. ಯಾಕೆಂದರೆ ಸರ್ಕಾರ ದೇಶದಾದ್ಯಂತ ಪ್ರತಿ ಹೆಜ್ಜೆಗೂ ಇಂತಹ ಕೇಂದ್ರಗಳನ್ನು ತೆರೆಯಬೇಕಾದಿತು. ಹೀಗಾಗಿ ಜನ ವಿರೋಧಿ ಮಸೂದೆಯ ಬಗ್ಗೆ ಮೌನವಾಗಿರುವುದಕ್ಕಿಂತ ಇದನ್ನು ವಿರೋಧಿಸಿ ನೀವು ಕೈಗೊಳ್ಳುವ ಕ್ರಮವನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇನೆ ಎಂದು ಸೆಂಥಿಲ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here