ಮುಂಬೈ:  ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಭಾರತ್. ಇನ್ನೇನು  ಬಿಡುಗಡೆಗೆ ಸಿದ್ಧವಾಗಿರುವ ‘ಭಾರತ್’ ಸಿನಿಮಾಗೆ ಕಂಟಕವೊಂದು ಎದುರಾಗಿದೆ. ಈ ಸಿನಿಮಾದ ಶೀರ್ಷಿಕೆ ಬದಲಿಸಬೇಕು ಎಂದು ದೆಹಲಿ ಕೋರ್ಟ್ ನ ನ್ಯಾಯಾಧೀಶ ವಿಪಿನ್ ತ್ಯಾಗಿ ಎಂಬವರು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ಪ್ರಕಾರ ಭಾರತ್ ಎಂಬ ಶೀರ್ಷಿಕೆ ಸಂವಿಧಾನದ ಸೆಕ್ಷನ್ 3ರ ಪ್ರಕಾರ ಕಾನೂನು ಬಾಹಿರವಾಗಿದೆ. ನಮ್ಮ ದೇಶದ ಲಾಂಛನಗಳನ್ನು ಮತ್ತು ಹೆಸರನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವಂತಿಲ್ಲ. ಅಸಮರ್ಪಕ ಬಳಕೆಗಳನ್ನು ತಡೆಗಟ್ಟುವ ಕಾಯಿದೆ ಪ್ರಕಾರ ‘ಭಾರತ್’ ಎಂಬ ಹೆಸರನ್ನು ಸಿನಿಮಾ ಟೈಟಲ್ ಆಗಿ ಬಳಸುವುದು ತಪ್ಪು ಎಂದು ಹೇಳಲಾಗಿದೆ.

‘ಭಾರತ್’ ಎಂಬ ಹೆಸರನ್ನು ಬಳಸಿರುವ ಕಾರಣ ಕೆಲವು ಸಂಭಾಷಣೆಗಳನ್ನು ಬದಲಾಯಿಸಬೇಕು. ‘ಭಾರತ್’ ಎಂಬ ಪಾತ್ರಧಾರಿಯನ್ನು ದೇಶಕ್ಕೆ ಹೋಲಿಕೆ ಮಾಡಿದಾಗ ಅದೂ ದೇಶದ ಜನರ ದೇಶಭಕ್ತಿಯ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತದೆ ಎಂದು ನಮೂದಿಸಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.