ರಾಜಸ್ತಾನ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜಸ್ತಾನದಲ್ಲಿ 25 ಸೀಟುಗಳನ್ನು ಗೆಲ್ಲಲಿದೆಯೆಂದು ಕಾಂಗ್ರೆಸ್ ಮುಖಂಡ ಸಚಿನ್ ಪೈಲೆಟ್ ಭವಿಷ್ಯ ನುಡಿದಿದ್ದಾರೆ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೆ ಏರಿದ್ದನ್ನು ಸ್ಮರಿಸಬಹುದಾಗಿದೆ.

ಬಿಜೆಪಿ ಸರಕಾರ ಕಳೆದ ಐದು ವರ್ಷಗಳ ತನ್ನ ಆಡಳಿತೆಯಲ್ಲಿ ತಾನು ಜನರಿಗಾಗಿ ಏನು ಮಾಡಿದ್ದೇನೆ ಎಂಬುದನ್ನು ಮನವರಿಕೆ ಮಾಡುವಲ್ಲಿ ಸೋತಿರುವುದೇ ಕಾಂಗ್ರೆಸ್‌ ಗೆಲುವಿಗೆ ಕಾರಣವಾಗಲಿದೆ ಎಂಬ ವಿಶ್ವಾಸವನ್ನು ರಾಜಸ್ಥಾನದ ಉಪ ಮುಖ್ಯಮಂತ್ರಿಯಾಗಿರುವ ಪೈಲಟ್‌ ವ್ಯಕ್ತಪಡಿಸಿದರು.

ಆಡಳಿತೆ, ಹೂಡಿಕೆ ಇತ್ಯಾದಿ ವಿಷಯಗಳ ಮೇಲೆ ಚುನಾವಣಾ ಪ್ರಚಾರಾಭಿಯಾನಗಳು ನಡೆಯಬೇಕು. ಕಾಂಗ್ರೆಸ್‌ ಪಕ್ಷ ಧನಾತ್ಮಕ ಅಭಿಯಾನ ನಡೆಸಿದೆ; ಆದರೆ ಬಿಜೆಪಿ ತನ್ನ ರಿಪೋರ್ಟ್‌ ಕಾರ್ಡ್‌ ಜನರಿಗೆ ತೋರಿಸಿಲ್ಲ; ಉದ್ಯೋಗಾವಕಾಶಗಳು ಯುವ ಜನರಿಗೆ ಅತೀ ಮುಖ್ಯ; ಅದರ ಬಗ್ಗೆ ಬಿಜೆಪಿ ಮಾತನಾಡುತ್ತಿಲ್ಲ ಎಂದು ಪೈಲಟ್‌ ಹೇಳಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.