ಸೌಂಥಾಪ್ಟನ್: ದಿ ರೌಸ್​ ಬೌಲ್​ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಟೂರ್ನಿಯ 19ನೇ ಪಂದ್ಯದಲ್ಲಿ ಜೋ ರೂಟ್​ ಅವರ ಭರ್ಜರಿ ಶತಕದ ನೆರವಿನಿಂದ ಆತಿಥೇಯ ಇಂಗ್ಲೆಂಡ್​ ಪಡೆ ವೆಸ್ಟ್​ಇಂಡೀಸ್​ ವಿರುದ್ಧ 8 ವಿಕೆಟ್​ಗಳ ಅಮೋಘ ಜಯಗಳಿಸಿದೆ.

ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ವೆಸ್ಟ್​ ಇಂಡೀಸ್​ ತಂಡ ಇಂಗ್ಲೆಂಡ್​ ತಂಡದ ಮಾರಕ ಬೌಲಿಂಗ್​ ದಾಳಿ ತತ್ತರಿಸಿ 212 ರನ್​ಗೆ ಸರ್ವಪತನಗೊಂಡಿತು.

ಸಾಧಾರಣ ಮೊತ್ತವನ್ನು ಬೆನ್ನತ್ತಿದ ಇಂಗ್ಲೆಂಡ್​ ತಂಡ ತಂಡ ಜೋ ರೂಟ್​ (100*), ಜಾನಿ ಬ್ಯಾರ್ಸ್ಟೋ (45) ಹಾಗೂ ಕ್ರಿಸ್​ ವೋಕ್ಸ್​ (40) ಅವರ ಅದ್ಭುತ ಆಟದ ನೆರವಿನಿಂದ 33.1 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 213 ರನ್​ ಕಲೆಹಾಕುವ ಮೂಲಕ ವಿಂಡೀಸ್​ ವಿರುದ್ಧ ಗೆಲುವಿನ ಸಿಹಿಯನ್ನುಂಡಿತು.

ವೆಸ್ಟ್​ ಇಂಡೀಸ್​ ಪರ ಶೆನಾನ್​ ಗೇಬ್ರಿಯಲ್​ 2 ವಿಕೆಟ್​ ಪಡೆದಿದ್ದನ್ನು ಬಿಟ್ಟರೆ, ಉಳಿದ ಯಾವೋಬ್ಬ ಬೌಲರ್​ ಕೂಡ ಆಂಗ್ಲ ಪಡೆಯನ್ನು ಕಟ್ಟುಹಾಕುವಲ್ಲಿ ಯಶಸ್ವಿಯಾಗಲಿಲ್ಲ.

ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ವಿಂಡೀಸ್​ ಪರ ನಿಕೋಲಸ್​ ಪೂರನ್​ (63), ಶಿಮ್ರಾನ್​ ಹೆಟ್ಮಯರ್ ​(39) ಹಾಗೂ ಕ್ರಿಸ್​ ಗೇಲ್​ (36) ರಸೆಲ್​ (21) ಬಿಟ್ಟರೆ ಉಳಿದ ಯಾವೊಬ್ಬ ಬ್ಯಾಟ್ಸ್​ಮನ್ ಆಂಗ್ಲರ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಲಿಲ್ಲ.

ಇಂಗ್ಲೆಂಡ್​​ ಪರ ಉತ್ತಮ ಬೌಲಿಂಗ್​ ದಾಳಿ ಮಾಡಿದ ಜೋಫ್ರಾ ಆರ್ಚರ್​ ಹಾಗೂ ಮಾರ್ಕ್​ವುಡ್​ ತಲಾ 3 ವಿಕೆಟ್​ ಕಬಳಿಸಿ ವಿಂಡೀಸ್​ ತಂಡವನ್ನು ಸಾಮಾನ್ಯ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಜೋ ರೂಟ್​ 2, ಕ್ರಿಸ್​ ವೋಕ್ಸ್​ ಮತ್ತು ಲಿಯಾಮ್​ ಪ್ಲಂಕೆಟ್​ ತಲಾ ಒಂದೊಂದು ವಿಕೆಟ್​ ಪಡೆದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.