ಈಜಿಪ್ಟ್: ಈಜಿಪ್ಟಿನ ಅಧ್ಯಕ್ಷ ಫತೆಹ್ ಅಲ್ ಸಿಸಿ ಅಧಿಕಾರದಿಂದ ಕೆಳಗಿಳಿಯಬೇಕೆಂದು ಆಗ್ರಹಿಸಿ ಈಜಿಪ್ಟಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತಿದೆ.

ಶಾಂತಿಯುತ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಸಲುವಾಗಿ ಈಜಿಪ್ಟ್ ಸರಕಾರ ಸುಮಾರು 70 ಕ್ಕಿಂತ ಹೆಚ್ಚು ಮಂದಿಯನ್ನು ಬಂಧಿಸಿದೆ. ಈ ಬಂಧನವನ್ನು ಖಂಡಿಸಿರುವ ಮಾನವ ಹಕ್ಕು ಸಂಘಟನೆಗಳು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರನ್ನು ಬಂಧಿಸಿರುವುದು ಖಂಡನಾರ್ಹ. ಕೂಡಲೇ ಬಿಡುಗಡೆಗೊಳಿಸಲು ಆಗ್ರಹಿಸಿದೆ.

ಪ್ರತಿಭಟನೆಯನ್ನು ವರದಿ ಮಾಡಲು ಮಾಧ್ಯಮಗಳಿಗೆ ನಿರ್ಬಂಧವಿದ್ದು ಅಲ್ ಜಝೀರಾ ಸೇರಿದಂತೆ ಇತರ ಪತ್ರಕರ್ತರಿಗೆ ವರದಿ ಮಾಡದಂತೆ ತಡೆಯಲಾಗುತ್ತಿದೆಯೆಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.