ನವದೆಹಲಿ: ವಿದೇಶದಲ್ಲಿ ತಲೆಮರೆಸಿಕೊಂಡು ಉದ್ಯಮಿಗಳಿಗೆ, ಶ್ರೀಮಂತರಿಗೆ ಬೆದರಿಕೆಯೊಡ್ಡಿ ನರಿಯಂತೆ ಜೀವನ ಸಾಗಿಸುತ್ತಿದ್ದ ರವಿ ಪೂಜಾರಿ ಕೆಲವು ತಿಂಗಳ ಹಿಂದೆ ಸೆನೆಗಲ್ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು.

ಇದೀಗ ಭಾರತೀಯ ಪೊಲೀಸರು ಭಾರತದಲ್ಲಿರುವ ಆತನ ಪ್ರಕರಣ ಮತ್ತು ಆತ ಅಂಟೋಣಿ ಫರ್ನಾಂಡೀಸ್ ಅಲ್ಲ ರವಿ ಪೂಜಾರಿಯೆಂದು ಸೆನೆಗಲ್ ನ್ಯಾಯಾಲಯಕ್ಕೆ ಮನದಟ್ಟು ಮಾಡಿದ್ದು ವಾರದೊಳಗೆ ಭಾರತೀಯ ಪೊಲೀಸರು ಆತನನ್ನು ಭಾರತಕ್ಕೆ ತಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಬೆದರಿಸಿ ರೋಲ್ ಕಾಲ್ ವಸೂಲಿ ಮಾಡಿ ಸಾಕಷ್ಟು ಹಣ ಗಳಿಸಿ ಸೆನೆಗಲ್ ನಲ್ಲಿ ಹಲವಾರು ಉದ್ದಿಮೆ ಮಾಡಿದ್ದ ರವಿ ಪೂಜಾರಿ. ದೇಶದ್ರೋಹದ ಹಣದಲ್ಲಿ ‘ನಾಮಸ್ತೆ ಇಂಡಿಯಾ’ ಹೋಟೆಲ್ ಸೆನಗಲ್ ನಲ್ಲಿ ನಡೆಸುತ್ತಿದ್ದ. ಇದೀಗ ಸೆನೆಗಲ್ ಪೊಲೀಸರು ಈತನ ಎಲ್ಲ ಆಸ್ತಿ ಪಾಸ್ತಿಗಳನ್ನು ಜಪ್ತಿ ಮಾಡಿ, ಆತನನ್ನು ಭಾರೀ ಭದ್ರತೆಯ ಜೈಲಿನಲ್ಲಿ ಕೂಡಿ ಹಾಕಲಾಗಿದೆ.ಈತನ ಮೇಲೆ ಭಾರತದಲ್ಲಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತಿನಲ್ಲಿ ಕೊಲೆ, ಬೆದರಿಕೆ, ಕೊಲೆ ಯತ್ನ ಮತ್ತು ಹಫ್ತ ವಸೂಲಿಯ ಪ್ರಕರಣಗಳಿವೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.