ಜೈಪುರ: ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಜುಲೈ 6 ರಂದು ಪೊಲೀಸ್ ಕಸ್ಟಡಿಯಲ್ಲಿ ಭಾವ ಮೃತಪಟ್ಟ ಬಳಿಕ ದಲಿತ ಮಹಿಳೆಯನ್ನು ಥಳಿಸಿ, ಹಿಂಸಿಸಿ, ಸಾಮೂಹಿಕ ಅತ್ಯಾಚಾರ ಎಸಗಿ ದೌರ್ಜನ್ಯ ಎಸಗಿದ ಆರೋಪದ ಮೇಲೆ ಅಮಾನತುಗೊಂಡ ಇನ್ಸ್‌ಪೆಕ್ಟರ್ ಸೇರಿ ಸುಮಾರು ಆರು ಜನ ಪೊಲೀಸರ ವಿರುದ್ಧ ಭಾನುವಾರ ಪ್ರಕರಣ ದಾಖಲಿಸಲಾಗಿದೆ.

ಸದ್ಯ ಸಂತ್ರಸ್ತೆಯನ್ನು ಜೈಪುರದ ಎಸ್‌ಎಂಎಸ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಹಿಳೆ ಮತ್ತು ಆಕೆಯ ಭಾವ ನೇಮಿಚಂದ್‌ ಅವರನ್ನು ಚುರುವಿನ ಸರ್ದಾರ್‌ಶಹರ್‌ ಪೊಲೀಸ್‌ ಠಾಣೆಯ ಪೊಲೀಸರು ಬಂಧಿಸಿ ಕರೆತಂದಿದ್ದರು.
ಮಹಿಳೆ ಹೇಳಿಕೆಯ ಪ್ರಕಾರ ಎಸ್‌ಎಚ್‌ಒ ಸೇರಿದಂತೆ ಐದರಿಂದ ಆರು ಜನ ಪೊಲೀಸರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಪ್ರಕರಣದ ತನಿಖೆಯನ್ನು ಸಿಐಡಿ-ಸಿಬಿ ನಡೆಸುತ್ತಿದೆ ಎಂದು ಸರ್ದಾರ್‌ಶಹರ್‌ ಪೊಲೀಸ್‌ ಠಾಣೆಯ ಎಸ್‌ಎಚ್‌ಒ ಮಹೇಂದ್ರ ದತ್‌ ಶರ್ಮಾ ತಿಳಿಸಿದ್ದಾರೆ.

ನೇಮಿಚಂದ್‌ ಸೋದರ ಹೇಳುವಂತೆ, ಜೂ. 30 ರಂದು ಅಣ್ಣನನ್ನು ಬಂಧಿಸಲಾಗಿತ್ತು. ಬಳಿಕ ಜು. 3ರಂದು ಮನೆಗೆ ಬಂದ ಪೊಲೀಸರು ನನ್ನ ಹೆಂಡತಿಯನ್ನು ಬಂಧಿಸಿ ಕರೆದೊಯ್ದರು. ಪೊಲೀಸ್‌ ಠಾಣೆಗೆ ತೆರಳುವ ಮಾರ್ಗ ಮಧ್ಯೆ ತನಗೆ ಥಳಿಸಿ ಚಿತ್ರಹಿಂಸೆ ನೀಡುತ್ತಿರುವ ಕುರಿತು ನೇಮಿಚಂದ್‌ ಮಹಿಳೆಯ ಬಳಿ ಹೇಳಿಕೊಂಡಿದ್ದ. ಇಬ್ಬರನ್ನು ಠಾಣೆಗೆ ಕರೆದೊಯ್ದು ಚೆನ್ನಾಗಿ ಥಳಿಸಿ ಹಿಂಸೆ ನೀಡಿದ ಪೊಲೀಸರು ಜು. 6ರಂದು ನೇಮಿಚಂದ್‌ನನ್ನು ಹತ್ಯೆ ಮಾಡಿದ್ದರು ಎನ್ನುತ್ತಾರೆ.

ಬಳಿಕ ಲಾಕಪ್‌ ಡೆತ್‌ಗೆ ಸಾಕ್ಷಿಯಾಗಿದ್ದ ನನ್ನ ಪತ್ನಿಗೆ ಚೆನ್ನಾಗಿ ಥಳಿಸಿ, ಉಗುರುಗಳನ್ನು ಕಿತ್ತುಹಾಕಿ, ಕಣ್ಣಿಗೆ ಹಾನಿಮಾಡಿ ಮತ್ತು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ ಜು. 7ರಂದು ಯಾರಿಗೂ ತಿಳಿಯದಂತೆ ನನ್ನ ತಮ್ಮನ ಅಂತ್ಯಕ್ರಿಯೆ ನಡೆಸುವಂತೆ ಕುಟುಂಬಕ್ಕೆ ಒತ್ತಡ ಹೇರಿದ್ದರು ಎಂದು ದೂರಿದ್ದಾರೆ.

ಲಾಕಪ್‌ ಡೆತ್‌ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಠಾಣೆಯ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.

ಕೃಪೆ : ANI

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.