ನವದೆಹಲಿ-ಕೊಸ್ಟಲ್ ಮಿರರ್: ರಾಜಸ್ಥಾನದಲ್ಲಿ ವಿಧಾನ ಸಭೆ ಚುನಾವಣೆಯ ಬಿಸಿ ಕಾವೇರುತ್ತಿದ್ದು, ಬಿಜೆಪಿ ರಾಮ ಮಂದಿರ ವಿವಾದವನ್ನು ಚುನಾವಣೆಯ ಅಸ್ತ್ರವನ್ನಾಗಿ ಬಳಸುತ್ತಿರುವಾಗಲೇ, ಕಾಂಗ್ರೇಸ್ ಬಿಜೆಪಿ ಆಡಳಿತದಲ್ಲಿರುವಾಗ ಧ್ವಂಸ ನಡೆಸಿರುವ ದೇವಸ್ಥಾನಗಳನ್ನು ಹಿಡಿದು ರಂಗೋಲಿಯಡಿ ನುಸುಳಲು ಮಾಸ್ಟರ್ ಪ್ಲ್ಯಾನ್ ರೂಪಿಸಿದೆ.

ರಾಮಜನ್ಮಭೂಮಿ ಹೋರಾಟದ ಅಸ್ತ್ರ ಹಿಡಿದು ಚುನಾವಣೆಗೆ ಮುಂದಾಗಿರುವ ಬಿಜೆಪಿಗೆ ಅದರದ್ದೇ ಭಾಷೆಯಲ್ಲಿ ತಿರುಗೇಟು ಕೊಡಲು ಕಾಂಗ್ರೆಸ್ ಸಜ್ಜಾಗಿದೆ. ಅದಕ್ಕೆ ಈಗ ಜೈಪುರದ ರೋಜಗಾರೇಶ್ವರ ದೇವಸ್ಥಾನದ ವಿವಾದ ಅಸ್ತ್ರ ಸಿಕ್ಕಿದೆ. ರಾಜಸ್ಥಾನದಲ್ಲಿ ಬಿಜೆಪಿ ತನ್ನ ಆಡಳಿತಾವಧಿಯಲ್ಲಿ ಇಲ್ಲಿಯವರೆಗೂ ನೆಲಸಮ ಮಾಡಿರುವ ದೇವಸ್ಥಾನಗಳ ವಿಚಾರವನ್ನು ಮುನ್ನೆಲೆಗೆ ತರಲು ಕಾಂಗ್ರೆಸ್​​ ಚಿಂತಿಸಿದೆ.

ಈ ಮೂಲಕ ಬಿಜೆಪಿಗೆ ತಿರುಮಂತ್ರ ಹಾಕಲು ಮುಂದಾಗಿದೆ. ಬಿಜೆಪಿ ಈಗಾಗಲೇ ಅಭಿವೃದ್ಧಿಯ ಹೆಸರಿನಲ್ಲಿ ಜೈಪುರದ ರೋಜಗಾರೇಶ್ವರ ದೇವಸ್ಥಾನವನ್ನು ಕೆಡವಿದೆ. ಮೆಟ್ರೋ ನಿರ್ಮಾಣ ಮಾಡಬೇಕೆಂಬ ಉದ್ದೇಶದೊಂದಿಗೆ ರೋಜಗಾರೇಶ್ವರ ದೇವಸ್ಥಾನವನ್ನು ನೆಲಸಮ ಮಾಡಬೇಕಾಯ್ತು ಎಂದು ಬಿಜೆಪಿ ಸರ್ಕಾರ ಹೇಳಿಕೊಂಡಿದೆ.

ಮೊದಲಿಗೆ ಇದೇ ದೇವಸ್ಥಾನದ ವಿಷಯವನ್ನು ಮುನ್ನೆಲೆಗೆ ತರುವ ಮುಖೇನ ಬಿಜೆಪಿ ವಿರುದ್ಧ ಕಾಂಗ್ರೆಸ್​​ ಜನಾಭಿಪ್ರಾಯಕ್ಕೆ ಸಿದ್ಧತೆ ನಡೆಸಿಕೊಂಡಿದೆ. ಈ ಹಿಂದೆ ಬಿಜೆಪಿ ಇದೇ ರೀತಿಯಲ್ಲಿ ಹಲವಾರು ಪುರಾತನ ದೇವಾಲಯಗಳನ್ನು ಅಭಿವೃದ್ದಿ ಹೆಸರಿನಲ್ಲಿ ಕೆಡವಲು ನಿರ್ಧರಿಸಿತ್ತು. ಈ ಸಂದರ್ಭದಲ್ಲಿ ಕೇಸರಿ ಪಕ್ಷದಲ್ಲಿಯೇ ಆಂತರಿಕ ಜಗಳವುಂಟಾಗಿ ಈ ಯೋಜನೆ ಕೈಬಿಡಬೇಕಾಯಿತು ಎನ್ನಲಾಗಿದೆ.

ಅಲ್ಲದೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರ ಮುಂದಿಟ್ಟುಕೊಂಡು ರಾಜಸ್ಥಾನ ಸರಕಾರ ಚುನಾವಣೆಗೆ ಹೋಗಲು ತೀರ್ಮಾನಿಸಿದೆ. ಇದಕ್ಕೆ ತಿರುಗೇಟು ನೀಡಲು ಮುಂದಾಗಿರುವ ಕಾಂಗ್ರೆಸ್ ಬಿಜೆಪಿ ಮಾದರಿಯಲ್ಲೇ ಚುನಾವಣೆಯಲ್ಲಿ ದೇವಸ್ಥಾನ ವಿಚಾರ ಬಳಕೆಗೆ ನಿರ್ಧರಿಸಿದ್ದು ಈ ಬಾರಿ ಚುನಾವಣೆ ಬಿಜೆಪಿ ಪಾಲಿಗೆ ಕಬ್ಬಿಣದ ಕಡಲೆ ಕಾಯಿಯಾಗಿ ಪರಿಣಮಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.