ರಾಜಸ್ತಾನ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಎಲ್ಲ ಸ್ಥಾನಗಳನ್ನು ಸೋತ ನಂತರ ಇದೀಗ ರಾಜಸ್ಥಾನದಲ್ಲಿ ಇದೀಗ ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಬೇಕೆಂಬ ಕೂಗು ವ್ಯಾಪಕವಾಗಿದೆ.

ಇದೀಗ ತೋಡಾ ಭೀಮ್ ಕ್ಷೇತ್ರದ ಶಾಸಕ ಪ್ರಥ್ವಿರಾಜ್ ಮೀನಾ ಸಾರ್ವಜನಿಕವಾಗಿಯೇ ಅಸಮಾಧಾನ ಹೊರ ಹಾಕಿದ್ದು ಅಶೋಕ್ ಗೆಹ್ಲೋಟ್ ರವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದು ಯುವ ನಾಯಕತ್ವಕ್ಕೆ ಮನ್ನಣೆ ನೀಡಬೇಕೆಂದು ಹೇಳಿದ್ದಾರೆ.

ನಂತರ ಮಾತನಾಡಿದ ಅವರು ಅಶೋಕ್ ಗೆಹ್ಲೋಟ್ ಗಿಂತ ಸಚಿನ್ ಪೈಲೆಟ್ ಉತ್ತಮ ಆಯ್ಕೆಯೆಂದು ಹೇಳಿಕೊಂಡಿದ್ದಾರೆ. ಸಚಿನ್ ಪೈಲೆಟ್ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾಗಿದ್ದರು ಎಂದು ಹೇಳಿದ್ದಾರೆ.

ಅಶೋಕ್ ಗೆಹ್ಲೋಟ್ ಜಾತ್ ಮತ್ತು ಗುಜ್ಜರ್ ಗಳನ್ನು ಜೊತೆಯಾಗಿರಿಸುವಲ್ಲಿ ವಿಫಲರಾಗಿದ್ದಾರೆನ್ನುವ ಮೂಲಕ ಬಹಿರಂಗವಾಗಿ ಪ್ರಭಾವಿ ಮೀನಾ ಬುಡಕಟ್ಟಿನ ಶಾಸಕ ಪ್ರಥ್ವಿರಾಜ್ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ರಾಜಸ್ತಾನದಲ್ಲಿ 25 ಕ್ಷೇತ್ರಗಳಲ್ಲೂ ಸೋತು ಹೋಗಿತ್ತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.