ಉಡುಪಿ: ಬಿಸಿಲ ಬೇಗೆಗೆ ತಂಪೆರದ ಗುಡುಗು-ಮಿಂಚು ಸಹಿತ ಮಳೆ

ಉಡುಪಿ: ಬಿಸಿಲ ಬೇಗೆಗೆ ಬೆಂದಿದ್ದ ಕರಾವಳಿ ಜನತೆಗೆ ಇಂದು ಸಂಜೆ ಸುರಿದ ಮಳೆಯು ತಂಪೆರದಿದೆ. ಗುಡಗು ಸಿಡಿಲು ಸಮೇತ ಭಾರಿ ಮಳೆಯಾಗಿದ್ದು, ಹವಾಮಾನ ಇಲಾಖೆ ಈ ಮುಂಚೆ ತಿಳಿಸಿದಂತೆ ಗಾಳಿ ಸಮೇತ ಭಾರಿ ಮಳೆಯಾಗುತ್ತಿದೆ.

ಸಂಜೆಯಿಂದಲೇ ಉಡುಪಿ, ಮಂಗಳೂರಿನಾದ್ಯಂತ ಮೋಡ ಕವಿದ ವಾತಾವರಣವಿತ್ತು. ಸೂರ್ಯಾಸ್ತಮದ ಬಳಿಕ ಭಾರಿ ಮಳೆಯಾಗುತ್ತಿದ್ದು ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪನೆಸಗಿದೆ. ಬಿಸಿಲ ತಾಪವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುವ ಸಾಧ್ಯತೆಗಳಿದ್ದವು. ಇದೀಗ ಸುರಿದ ಭಾರಿ ಮಳೆಯು ಸ್ವಲ್ಪ ಮಟ್ಟಿಗೆ ಆಸರೆಯಾಗಲಿದೆ.