ಬೆಂಗಳೂರು :ಬಿಹಾರ ಪ್ರವಾಹದಲ್ಲಿ ಸತ್ತವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಮಧ್ಯೆ ಈ ವಿಚಾರ ರಾಜಕೀಯ ಬಣ್ಣ ತಾಳಿದೆ. ಪ್ರವಾಹದಲ್ಲಿ ಇಷ್ಟೊಂದು ಜನರು ಸಾವನ್ನಪ್ಪಲು  ಮುಖ್ಯಮಂತ್ರಿ ನಿತೀಶ್​ ಕುಮಾರ್​ ನೇತೃತ್ವದ ಜೆಡಿಯು ಕಾರಣ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್​ ಆರೋಪಿಸಿದ್ದಾರೆ.

ನಿತೀಶ್​ ಕುಮಾರ್​ ಅವರನ್ನು ಹೊಗಳಿ ವಿಡಿಯೋಗಳನ್ನು ಪೋಸ್ಟ್​ ಮಾಡುತ್ತಿದ್ದ ಗಿರಿರಾಜ್​ ಶುಕ್ರವಾರ ತಿರುಗಿ ಬಿದ್ದಿದ್ದರು. “ಭಾರೀ ಮಳೆಯಿಂದ ಪಾಟ್ನಾದಲ್ಲಿ ಏನೆಲ್ಲ ಅವಘಡಗಳು ಸಂಭವಿಸಿವೆ ಅದಕ್ಕೆ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಹಾಗೂ ಉಪಮುಖ್ಯಮಂತ್ರಿ ಸುಶೀಲ್​ ಮೋದಿ ಜವಾಬ್ದಾರರು,” ಎಂದು ಟೀಕೆ ಮಾಡಿದ್ದರು.ಈಗ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಗಿರಿರಾಜ್​, “ನಾಯಕನಾದವನು ಒಳ್ಳೆಯ ಕೆಲಸಕ್ಕೆ ಚಪ್ಪಾಳೆ ಪಡೆದುಕೊಳ್ಳುವುದು ಮಾತ್ರವಲ್ಲ, ನಿರ್ವಹಣೆ ಸರಿಯಾಗಿ ಮಾಡದಿದ್ದಾಗ ಬೈಗುಳವನ್ನು ಸ್ವೀಕರಿಸಲು ಸಿದ್ಧನಿರಬೇಕು,” ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.