ನವದೆಹಲಿ : ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಮಾಡುವಾಗ ನರೇಂದ್ರ ಮೋದಿ ದಿವಂಗತ ರಾಜೀವ್ ಗಾಂಧಿ ನಂಬರ್ ಒನ್ ಭ್ರಷ್ಟಾಚಾರಿಯಾಗುವ ಮೂಲಕ ತನ್ನ ಕೊನೆ ಉಸಿರೆಳೆದಿದ್ದರು ಎಂಬ ಹೇಳಿಕೆ ನೀಡುವ ಮೂಲಕ ರಾಹುಲ್ ಗಾಂಧಿಯನ್ನು ಪರೋಕ್ಷವಾಗಿ ಟೀಕಿಸಿದ್ದರು.

ಅದಕ್ಕೆ ಪ್ರತಿಕ್ರೀಯಿಸಿ ಮಾತನಾಡಿದ ರಾಹುಲ್ ಗಾಂಧಿ ನಾನೆಂದು ಮೋದಿಯವರ ತಂದೆ ತಾಯಿಗೆ ಅವಮಾನ ಮಾಡುವುದಿಲ್ಲ, ಮೋದಿಯವರು ಮತ್ತು ಬಿಜೆಪಿಯವರು ಗಾಂಧಿ ಕುಟುಂಬದ ವಿರುದ್ಧ ಮಾತನಾಡುತ್ತಲೇ ಬಂದಿದ್ದಾರೆ, ಮೋದಿಯವರ ದ್ವೇಷದ ಭಾಷಣವನ್ನು ಮಾಡಿವ ಮೂಲಕ ಗಾಂಧಿ ಕುಟುಂಬದ ಬಗ್ಗೆ ಲಘುವಾಗಿ ಟೀಕಿಸುತ್ತಾರೆ ಆದರೆ ನಾನು ಸತ್ತರೂ ಮೋದಿ ಕುಟುಂಬದವರಿಗೆ ಅವಮಾನ ಮಾಡುವುದಿಲ್ಲ ನನ್ನ ಮೈಯಲ್ಲಿ ಹರಿಯುತ್ತಿರುವುದು ಕಾಂಗ್ರೆಸ್ ರಕ್ತವೇ ಹೊರತು ಆರ್ ಎಸ್ ಎಸ್ ಬಿಜೆಪಿಯವರ ರಕ್ತವಲ್ಲ, ಗಾಂಧಿ ಕುಟುಂಬವನ್ನು ಟೀಕಿಸುವುದು ಬಿಜೆಪಿ ಆರ್ ಎಸ್ ಎಸ್ ನ ರಕ್ತದಲ್ಲೆ ಹುಟ್ಟಿಕೊಂಡಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.