ಮಂಗಳೂರು: ಅಖಿಲ ಭಾರತೀಯ ಕಾಂಗ್ರೇಸ್ ಸಮಿತಿ ಅಧ್ಯಕ್ಷ ರಾಹುಲ್ ಗಾಂಧಿ ಈಗಾಗಲೇ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ್ದಾರೆ. ಅವರಿಂದು  ಜನಾಶಿರ್ವಾದ ಯಾತ್ರೆಯ ಪ್ರಯುಕ್ತ ಮಂಗಳೂರಿಗೆ ಆಗಮಿಸಿದ್ದು, ಉಚ್ಚಿಲದಲ್ಲಿ ನಡೆಯಲಿರುವ ರಾಜೀವ್ ಗಾಂಧಿ ನ್ಯಾಷನಲ್ ಅಕಾಡೆಮಿಯನ್ನು ಉದ್ಘಾಟಿಸಲಿದ್ದಾರೆ. 11.45 ಕ್ಕೆ ಸರಿಯಾಗಿ ಮಂಗಳೂರಿನಿಂದ ಹೊರಟು ಉಚ್ಚಿಲಕ್ಕೆ ಹೆಲಿಕಾಪ್ಟರ್ ಮೂಲಕ ಬಂದಿಳಿದಿದ್ದಾರೆ.

ಈ ಕಾರ್ಯಕ್ರಮದ ನಂತರ ಸುಮಾರು 2 ಗಂಟೆಯ ಹೊತ್ತಿಗೆ ಪಡುಬಿದ್ರಿಯಲ್ಲಿ ಕಾರ್ನರ್ ಮೀಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ. ಅದರ ನಂತರ ಮುಲ್ಕಿ ಮತ್ತು ಸುರತ್ಕಲ್ ನಲ್ಲಿ ರೋಡ್ ಶೋ ನಲ್ಲಿ ಭಾಗವಹಿಸಿ, ನೆಹರು ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.