ಮಲ್ಪೆ: ರಮಝಾನ್ ಕುರಾನ್ ನ ತಿಂಗಳು ತಕ್ವಾ(ದೇವನಿಗೆ ನಿಕಟರಾಗಿ), ಒಳಿತನ್ನು ಮೈಗೂಡಿಸಿಕೊಳ್ಳುವ ತರಬೇತಿಯ ತಿಂಗಳು. ಕುರಾನ್ ನ್ನು ಅರಿತು ಅಧ್ಯಯಿಸಿದ ನಾವು ಇನ್ನು ನಮ್ಮಲ್ಲಿ ಪರಿವರ್ತನೆ ತಂದು ಕುರಾನ್ ನ ನ್ಯಾಯದ, ಮಾನವೀಯತೆಯ ಶಿಕ್ಷಣಗಳನ್ನು ಮೈಗೂಡಿಸಿಕೊಂಡು ಸಮಾಜದ ನಿರ್ಮಾಣ ಮಾಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಬೇಕೆಂದು ಮಲ್ಪೆ ಜಾಮ ಮಸ್ಜಿದ್ ನ ಇಮಾಮ್ ಮತ್ತು ಖತೀಬರಾಗಿರುವ ಮೌಲಾನಾ ಇಮ್ರಾನುಲ್ಲಾ ಖಾನ್ ಈದ್ ನಮಾಝ್ ನಂತರದ ತನ್ನ ಉದ್ಭೋದನೆಯಲ್ಲಿ ಕರೆ ನೀಡಿದರು.

ರಮಝಾನ್ ನಲ್ಲಿ ಮಾತ್ರ ದೇಹೇಚ್ಚೆ ನಿಯಂತ್ರಿಸಿ ಆಮೇಲೆ ಮರೆತು ಬಿಡುವವರ ಉದಾಹರಣೆಯು, ಕೆಲ ದಿನಗಳಿಗಾಗಿ ಮಾತ್ರ ಸುರಕ್ಷೆಯ ಮತ್ತು ಉತ್ತಮ ಮನೆಯಲ್ಲಿ ವಾಸಿಸಿ ಆನಂತರ ಅಪಾಯಕಾರೀ ಪ್ರದೇಶವನ್ನು ಆಯ್ದುಕೊಳ್ಳುವವರಂತೆಯೆಂದು ಅವರು ಹೇಳಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.