ಮಂಗಳೂರು: ವಿವೇಕನಂದ ಕಾಲೇಜು ಪುತ್ತೂರಿನ ವಿದ್ಯಾರ್ಥಿಗಳು ನಡೆಸಿರುವ ಸಾಮೂಹಿಕ ಅತ್ಯಾಚಾರ ಪ್ರಕರಣ ಇದೀಗ ಭಾರೀ ಸುದ್ದಿಯಾಗಿದ್ದು ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗುತ್ತದೆ. ಈಗಾಗಲೇ ಪೊಲೀಸರು ಪ್ರಕರಣ ಬೆಳಕಿಗೆ ಬಂದ ಕೂಡಲೇ ಶೀಪ್ರ ಕಾರ್ಯಚರಣೆ ನಡೆಸಿ ದುಷ್ಕೃತ್ಯದಲ್ಲಿ ಪಾಲ್ಘೊಂಡ ಐವರು ವಿದ್ಯಾರ್ಥಿಗಳನ್ನು ಬಂಧಿಸಿ ಕಂಬಿ ಹಿಂದಕ್ಕೆ ತಳ್ಳಿದ್ದಾರೆ.

ಆದರೆ ಒಂದು ವಿಪರ್ಯಾಸದ ಮತ್ತು ಆತಂಕಕಾರಿ ಸಂಗತಿಯೆಂದರೆ ದುಷ್ಕರ್ಮಿಗಳು ದುಷ್ಕೃತ್ಯ ಎಸಗಿ ಅದರ ವೀಡಿಯೋ ವನ್ನು ಸಾಮಾಜಿಕ ಜಾಲಾತಾಣದಲ್ಲಿ ಹರಿಯ ಬಿಟ್ಟಿದ್ದರು. ಪ್ರಜ್ಞಾವಂತ ಜನರೆನಿಸಿಕೊಂಡವರು ಕೂಡಲೇ ಆ ವೀಡಿಯೋ ವನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿ ಸಂತ್ರಸ್ಥೆಯೊಂದಿಗೆ ನಿಲ್ಲುವ ಕೆಲಸ ಮಾಡಬೇಕಿತ್ತು. ಆದರೆ ಸಾಮಾಜಿಕ ಜಾಲಾತಾಣದಲ್ಲಿ ಆ ವೀಡಿಯೋ ಗಳನ್ನು ಫಾರ್ವಡ್ ಮಾಡುತ್ತ ವಿಕೃತ ಖುಷಿ ಪಡೆದವರ ಬಗ್ಗೆ ಮತ್ತು ಅವರ ಮನಸ್ಥಿತಿಯ ಬಗ್ಗೆ ಆತಂಕದ ವಾತವರಣವಿದೆ.

ಅಷ್ಟಕ್ಕೆ ಸುಮ್ಮನಿರದ ಕೆಲವು ಜನರು ಸಂತ್ರಸ್ಥೆಯ ಕುಟುಂಬದ ವಿವರವನ್ನು ಹೊರ ಹಾಕಿ ಅದನ್ನು ವಾಟ್ಸಪ್ ಮತ್ತು ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಮತ್ತಷ್ಟು ವಿಕೃತಿ ಮೆರೆಯುತ್ತಿದ್ದರು.

ವರಿಷ್ಡಾಧಿಕಾರಿ ಪತ್ರಿಕಾಗೋಷ್ಠಿ ನಡೆಸಿ ಸಂತ್ರಸ್ಥೆಯ ಮೇಲೆ ಅತ್ಯಾಚಾರವೆಸಗುವ ವೀಡಿಯೋ ವೈರಲ್ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸುವ ಸ್ಥಿತಿ ನಿರ್ಮಾಣವಾಗಿದ್ದು ಖೇದಕರ!

ಸಾಮಾಜಿಕ ಜಾಲಾತಾಣದಲ್ಲಿ ಇಂತಹ ವೀಡಿಯೋ ಶೇರ್ ಮಾಡಿ ಸಂತ್ರಸ್ಥೆಗೆ ಇನ್ನಷ್ಟು ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದ ಇಂತಹ ಜನರ ವಿಕೃತಿಯ ಬಗ್ಗೆ ಮರುಕ ಹುಟ್ಟುತ್ತಿದೆ. ಇನ್ನು ಕೆಲವು ಜನರು ಅತ್ಯಾಚಾರಕ್ಕೂ ಧರ್ಮದ ಲೇಪನ ಹಚ್ಚಿ ವಿಂಜೃಭಿಸಿ ಸಂತ್ರಸ್ಥೆಯ ತಾಯಿ ನಿರ್ದಿಷ್ಟ ಪಕ್ಷಕ್ಕೆ ಸೇರಿದವಳು ಎಂಬ ಮಾಹಿತಿ ಅರಿತು ಹೀಯಾಳಿಸುತ್ತ ಸಾಮಾಜಿಕ ಜಾಲಾತಾಣದಲ್ಲಿ ವಿಕೃತಿ ಮೆರೆಯುತ್ತಿದ್ದವರನ್ನು ನೋಡಿದಾಗ ಸಂತ್ರಸ್ಥೆಯ ಬಗ್ಗೆ ಅನುಕಂಪಗಿಂತ ದ್ವೇಷ ತೀರಿಸಿಕೊಳ್ಳಲು ಅವಕಾಶ ಲಭ್ಯವಾದಂತೆ ಕಾಣುತ್ತಿತ್ತು.

ಒಟ್ಟಿನಲ್ಲಿ ಈ ಪ್ರಕರಣ ಸಮಾಜಕ್ಕೆ ಹಲವು ಪಾಠ ಕಲಿಸಿ ಕೊಟ್ಟು ಹೋಗಿದೆ. ವಿದ್ಯಾರ್ಥಿಗಳ ಕ್ಷೇಮದ, ಬಗ್ಗೆ ಅಭಿವೃದ್ಧಿಯ ಬಗ್ಗೆ, ದೇಶ ಪ್ರೇಮದ ಬಗ್ಗೆ, ಇನ್ನೊಬ್ಬರ ದೇಶ ಪ್ರೇಮ ಪ್ರಶ್ನಿಸುತ್ತ ವಿಕೃತ ಆನಂದ ಪಡುತ್ತಿದ್ದ ವಿದ್ಯಾರ್ಥಿ ಸಂಘಟನೆಯೊಂದರ ನಾಯಕರು ಈ ದುಷ್ಕೃತ್ಯದಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಈ ಸಂಘಟನೆಗಳ ಕಾರ್ಯವೈಖರಿಯ ಬಗ್ಗೆ ಮತ್ತಷ್ಟು ಅನುಮಾನಿಸುವಂತೆ ಮಾಡಿದೆ.

ಒಟ್ಟಿನಲ್ಲಿ ಈ ಪ್ರಕರಣ ಅಡಗಿ ಕೊಂಡಿದ್ದ ಹಲವಾರು ಮುಖಗಳನ್ನು ಅನಾವರಣ ಮಾಡಿದ್ದು ಸುಳ್ಳಲ್ಲ. ಈ ಪ್ರಕರಣದ ಅಪರಾಧಿಗಳಿಗೆ ಗರಿಷ್ಠ ಶಿಕ್ಷೆಯಾಗಲಿ. ಸಂತ್ರಸ್ಥೆಗೆ ನ್ಯಾಯದೊಂದಿಗೆ ಸಮಾಜ ಘನತೆಯುಕ್ತ ಬದುಕು ಕಲ್ಪಿಸಲಿ ಎಂಬುದು ನಮ್ಮ ಹಾರೈಕೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.