ಸಿಗಡಿ ಮೀನುಗಳು ತುಂಬಾ ರುಚಿಕರವಾಗಿದ್ದು ಎಲ್ಲರಿಗೂ ಇಷ್ಟವಾಗುತ್ತದೆ.ಸಮುದ್ರ ಆಹಾರಗಳಲ್ಲಿ ಸೀಗಡಿ ಮೀನು ಕೂಡ ಉತ್ತಮವಾದ ಪೋಷಕಾಂಶವನ್ನು ಹೊಂದಿದ್ದು ಇದರಿಂದ ರುಚಿಕರವಾಗಿ, ಅನೇಕ ಬಗೆಯಲ್ಲಿ ಅಡುಗೆಯನ್ನು ತಯಾರಿಸಬಹುದು.

ಸಿಗಡಿ ಮೀನಿನ ಫ್ರೈ ಸುಲಭವಾಗಿ ಮಾಡುವುದು ಹೇಗೆ ಎಂದು ತಿಳಿಯೋಣ.

ಸೀಗಡಿ ಫ್ರೈಗೆ ಬೇಕಾಗುವ ಸಾಮಾಗ್ರಿಗಳು:

ಸೀಗಡಿ 1ಕೆಜಿ
ದೊಡ್ಡ ಗಾತ್ರದ ಈರುಳ್ಳಿ 2
ಅರಿಶಿಣ ಪುಡಿ 1/2 ಚಮಚ
ಬೆಳ್ಳುಳ್ಳಿ ಎಸಳು 7-8
ಜೀರಿಗೆ 1 ಚಮಚ
ಮೆಣಸಿನ ಪುಡಿ 2 ಚಮಚ
ಟೊಮೆಟೊ 1
ರುಚಿಗೆ ತಕ್ಕಷ್ಟು ಉಪ್ಪು
ಒಂದು ಇಂಚಿನಷ್ಟು ದೊಡ್ಡದಾದ ಶುಂಠಿ
ಸ್ವಲ್ಪ ಕರಿಬೇವಿನ ಎಲೆ
ಎಣ್ಣೆ ಸ್ವಲ್ಪ

ತಯಾರಿಸುವ ವಿಧಾನ: ಸೀಗಡಿ ಮೀನನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು.ಬಳಿಕ ಸ್ವಲ್ಪ ನೀರು ಹಾಕಿ, ಒಂದು ಚಮಚದಷ್ಟು ಉಪ್ಪು ಹಾಕಿ ಆವಿಯಾಗುವವರೆಗೆ ಬೇಯಿಸಬೇಕು. ನಂತರ ಬಾಣಲೆಯನ್ನು ಬಿಸಿ ಮಾಡಿ, ಅದರಲ್ಲಿ 5 ಚಮಚದಷ್ಟು ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಉದ್ದುದ್ದವಾಗಿ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವ ಹಾಗೆ ಹುರಿಯಬೇಕು.ಬಳಿಕ ಕತ್ತರಿಸಿದ ಟೊಮೆಟೊ, ಬೆಳ್ಳುಳ್ಳಿ, ಸ್ವಲ್ಪ ಜಜ್ಜಿದ ಶುಂಠಿ ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಹುರಿಯಬೇಕು. ನಂತರ ಮೆಣಸಿನ ಪುಡಿ, ಅರಿಶಿಣ ಪುಡಿ, ಜೀರಿಗೆ, ಸ್ವಲ್ಪ ಉಪ್ಪು , ಕರಿಬೇವಿನ ಎಲೆ ಹಾಕಿ ಮಿಶ್ರ ಮಾಡಬೇಕು, ಈಗ ಬೇಯಿಸಿದ ಸೀಗಡಿ ಮೀನು ಸೇರಿಸಿ 5 ನಿಮಿಷ ಬೇಯಿಸಿದರೆ ರುಚಿಕರವಾದ ಸೀಗಡಿ ಮೀನು ಫ್ರೈ ರೆಡಿ.

ಇದನ್ನು ಅನ್ನ ಹಾಗೂ ಪರೋಟ, ಚಪಾತಿ ಜತೆ ಬಿಸಿಯಾಗಿರುವಾಗಲೇ ಬಡಿಸಬೇಕು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.