ಉಡುಪಿ: ಅಕ್ಟೋಬರ್ 13 ರಿಂದ ಆರಂಭವಾಗುವ ದತ್ತಮಾಲ ವಿಚಾರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ದತ್ತಮಾಲ ಅಭಿಯಾನದಲ್ಲಿ 5000 ದತ್ತಮಾಲಧಾರಿಗಳು ಅಭಿಯಾನದಲ್ಲಿ ಪಾಲ್ಘೊಳ್ಳುವರೆಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶೋಭಾಯಾತ್ರೆ ಮತ್ತು ಧರ್ಮ ಸಭೆ ಹಮ್ಮಿಕೊಳ್ಳಲಾಗುವುದೆಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರವಾಹ ಪರಿಹಾರ ನಿಧಿ ವಿಳಂಬ ವಿಚಾರದಲ್ಲಿ ಚಕ್ರವರ್ತಿ ಸೂಲಿಬೆಲೆ ಪರವಹಿಸಿ ಮಾತನಾಡಿದ ಮುತಾಲಿಕ್, ಸೂಲಿಬೆಲೆಯನ್ನು ದೇಶದ್ರೋಹಿಯೆಂದು ಹೇಳಿರುವುದು ತಪ್ಪು. ಕೇಂದ್ರ ಸರಕಾರ ಮತ್ತು ಸಂಸದರು ಪರಿಹಾರ ನಿಧಿ ತರುವಲ್ಲಿ ವಿಫಲವಾಗಿದ್ದಾರೆ. 35000 ಕೋಟಿ ಬೇಡಿಕೆ ಇರುವಾಗ ಕೇವಲ 1200 ಕೋಟಿ ಬಿಡುಗಡೆ ಮಾಡಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಅಸಹಾಯಕರಾಗಿದ್ದಾರೆಂದು ಹೇಳಿದ್ದಾರೆ. ಅದರೊಂದಿಗೆ ಕೇಂದ್ರ ಸರಕಾರದ ಅತಿ ಕಡಿಮೆ ಮೊತ್ತವನ್ನು ಅತ್ಯಂತ ವಿಳಂಬವಾಗಿ ಬಿಡುಗಡೆ ಮಾಡಿದ್ದಾರೆಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.