ಬೆಂಗಳೂರು: ಲೋಕಸಭಾ ಚುನಾವಣಾ ಫಲಿತಾಂಶ ಇನ್ನೇನು ಘೋಷಣೆಯಾಗಲಿದೆ. ದೇಶಾದ್ಯಂತ ಎನ್ ಡಿ ಮೈತ್ರಿಕೂಟ ಮುನ್ನಡೆ ಸಾಧಿಸಿ ಮುನ್ನುಗ್ಗುತ್ತಿದೆ. ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿಯೂ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ನಟ ಪ್ರಕಾಶ್ ರಾಜ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಮತ ಎಣಿಕೆ ಶುರುವಾದಾಗಿನಿಂದಲೂ ಅವರಿಗೆ ಮುನ್ನಡೆ ಸಿಕ್ಕಿರಲಿಲ್ಲ.

ಬಗ್ಗೆ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದು ಟ್ವೀಟ್ ಎಲ್ಲರ ಗಮನ ಸೆಳೆಯುತ್ತಿದೆ. ಮೊದಲಬಾರಿಗೆ ಅದೃಷ್ಟ ಪರೀಕ್ಷೆಗೆ ನಿಂತಿದ್ದ ನಟ ಪ್ರಕಾಶ್ರಾಜ್ಅವರಿಗೆ ತೀವ್ರ ನಿರಾಸೆಯಾಗಿದೆ. ಬೆಂಗಳೂರು ಸೆಂಟ್ರಲ್ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಪ್ರಕಾಶ್ರಾಜ್ಠೇವಣಿಯನ್ನು ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ರಿಜ್ವಾನ್ಅರ್ಷದ್ಹಾಗೂ ಬಿಜೆಪಿಯ ಪಿ.ಸಿ ಮೋಹನ್ಗೆ ನೇರಾ ನೇರಾ ಹಣಾಹಣಿ ನಡೆಯುತ್ತಿದೆ. ಫಲಿತಾಂಶದ ಕುರಿತಂತೆ ಪ್ರಕಾಶ್ರಾಜ್​, ‘ ಫಲಿತಾಂಶ ನನ್ನ ಕಪಾಳಕ್ಕೆ ಜೋರಾಗಿ ಬಾರಿಸಿದಂತಾಗಿದೆ. ಅಸೂಯೆ.. ಟ್ರೋಲ್ಗಳು ಮಾತ್ರ ನನ್ನ ದಾರಿಗೆ ಬಂದಿವೆ. ಆದ್ರೆ ನಾನು ನನ್ನ ಜಾಗದಲ್ಲೇ ನಿಲ್ಲುತ್ತೇನೆ. ಸೆಕ್ಯುಲರ್ಭಾರತಕ್ಕಾಗಿ ನನ್ನ ಹೋರಾಟವನ್ನು ಮುಂದುವರೆಸುತ್ತೇನೆ. ಮುಂದೆ ತೀವ್ರ ಕಠಿಣ ಪಯಣವಿದೆ, ಅದಕ್ಕೆ ಇದು ಪ್ರಾರಂಭ ಮಾತ್ರ. ನನ್ನ ಜೊತೆ ನಿಂತ ಎಲ್ಲರಿಗೂ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.