ರಮಲ್ಲಾ: ಮಹಾತ್ಮ ಗಾಂಧಿಯವರ 150ನೇ ಜನ್ಮದಿನ ಪ್ರಯುಕ್ತ ಗಾಂಧೀಜಿಯವರ ಪರಂಪರೆ ಹಾಗೂ ಮೌಲ್ಯಗಳನ್ನು ಗೌರವಿಸುವ ಸಲುವಾಗಿ ಪ್ಯಾಲೆಸ್ಟೈನ್ ಮಂಗಳವಾರ ಅಂಚೆ ಚೀಟಿ ಬಿಡುಗಡೆಗೊಳಿಸಿದೆ.

ಪ್ಯಾಲೆಸ್ಟೈನ್​​ನಲ್ಲಿರುವ ಭಾರತದ ಪ್ರತಿನಿಧಿ ಸುನೀಲ್ ಕುಮಾರ್ ಸಮ್ಮುಖದಲ್ಲಿ ಪ್ಯಾಲೆಸ್ಟೈನ್ ದೂರಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಇಶಾಕ್ ಸೆಡೆರ್ ಅಂಚೆ ಚೀಟಿ ಬಿಡುಗಡೆಗೊಳಿಸಿದರು. ಮಹಾತ್ಮ ಗಾಂಧಿಯವರು ತೋರಿದ ಅಹಿಂಸೆ, ಮೌಲ್ಯಗಳು, ಬುದ್ಧಿವಂತಿಕೆ ಮತ್ತು ದೂರದೃಷ್ಟಿ ತತ್ವಗಳನ್ನು ಸೆಡರ್ ಒತ್ತಿ ಹೇಳಿದರು.

ಗಾಂಧೀಜಿಯವರ ಸ್ಮರಣೆ, ಪರಂಪರೆ ಹಾಗೂ ಮೌಲ್ಯಗಳನ್ನು ಗೌರವಿಸುವ ಸಲುವಾಗಿ ಪ್ಯಾಲೆಸ್ಟೈನ್ ಅಂಚೆ ಚೀಟಿ ಬಿಡುಗಡೆ ಮಾಡಿದೆ. ಗಾಂಧಿ ತೋರಿದ ಮಾರ್ಗದರ್ಶನಗಳು ಜನರನ್ನು ಮಾನವೀಯತೆಯತ್ತ ಮಾರ್ಗದರ್ಶನ ನೀಡುತ್ತವೆ ಎಂದು ಸುನೀಲ್ ಕುಮಾರ್ ಹೇಳಿದರು. ಮನುಕುಲ ಅಭಿವೃದ್ಧಿಗೆ ಮಹಾತ್ಮರ ಕೊಡುಗೆಗಳನ್ನು ಬಣ್ಣಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.