ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬ್ರಹ್ಮಾವರ ವಲಯ ಮತ್ತು ಕಸ್ತೂರಿಬಾ ಆಸ್ಪತ್ರೇ, ಮಣಿಪಾಲ ಇದರ ಜಂಟಿ ಆಶ್ರಯದಲ್ಲಿ ದಿನಾಂಕ 07.07.2019 ರ ರವಿವಾರ ಬೆಳಗ್ಗೆ 9:00 ರಿಂದ ಮಧ್ಯಾಹ್ನ 2:00 ರವರೆಗೆ ಜಾಮಿಯಾ ಮಸ್ಜೀದ್ ಹಾಲ್. ಉಪ್ಪಿನ್ ಕೋಟೆ ಯಲ್ಲಿ ಬೃಹತ್ ರಕ್ತಧಾನ ಶಿಬಿರ ದಲ್ಲಿ ಪಾಪ್ಯುಲರ್ ಫ್ರಂಟ್ ನ ಸದಸ್ಯರು ಮತ್ತು ಮುಸ್ಲಿಂ ಬಾಂಧವರು ಪಾಲ್ಗೊಂಡು ತಮ್ಮ ಅಮೂಲ್ಯ ರಕ್ತ ವನ್ನು 53 ಉನಿಟ್ ರಕ್ತ ವನ್ನು ಧಾನ ಮಾಡಿ ಮಾನವತೆ ಮರೆದರು.

ಈ ಕಾರ್ಯಕ್ರಮ ದಲ್ಲಿ K.M.C. ಆಸ್ಪತ್ರೇ ಮಣಿಪಾಲ ದ ಬ್ಲಡ್ ಬ್ಯಾಂಕ್ ಮುಖ್ಯಸ್ಥೆ ಮತ್ತು ವೈದ್ಯೆ ಡಾ| ಫಾತಿಮ ಉರೂಜ್ ಉಪಸ್ತಿತ ರಿದ್ದರು- ರಕ್ತ ಧಾನ ದಿಂದ ಆರೋಗ್ಯ ವೃದ್ದಿಸುವುದೇ ಹೊರತು ಆರೋಗ್ಯ ಕ್ಕೆ ತೊಂದರೆ ಅನ್ನಿಸುವುದಿಲ್ಲ ಎಂದು ಈ ಸಂದರ್ಭದಲ್ಲಿ ನುಡಿದರು.
ಅದೇ ರೀತಿ ಜಾಮಿಯಾ ಮಸ್ಜೀದ್ ಉಪ್ಪಿನ್ ಕೋಟೆಯ ಇಮಾಮರಾದ ಮೌಲಾನಾ ಸಲ್ಮಾನ್ ರವರು ಯಾರಾದರೂ ಒಬ್ಬ ವ್ಯಕ್ತಿ ಒಂದು ಜೀವ ವನ್ನು ಉಳಿಸುವುದೆಂದರೆ ಇಡೀ ಮಾನವ ಕುಲವನ್ನು ಉಳಿಸಿದಂತೆ. ಹಾಗು ಆರೋಗ್ಯದ ಬಗ್ಗೆ ವಿಸ್ತಾರವಾಗಿ ತಿಳಿಸಿದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಫಯಾಜ್ ಮಲ್ಪೆ, ಸಾಮಾಜಿಕ ಸೇವಾ ಮುನೀರ್ ಕಲ್ಮಾಡಿ, ಉಪ್ಪಿನ್ ಕೋಟೆ ಮದ್ರಾಸದ ಅಧ್ಯಕ್ಷರಾದ ತಜುದ್ದಿನ್ ಇಬ್ರಾಹಿಮ್, ಮಸೀದಿಯ ಅಧ್ಯಕ್ಷರಾದ ಜಮಾಲ್ ಹೈದರ್ ರವರು ಉಪಸ್ತಿತ ರಿದ್ದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬ್ರಹ್ಮಾವರ ವಲಯದ ವತಿಯಿಂದ ಅತಿಥಿಗಳಿಗೆ ನೆನಪಿನ ಕಾಣಿಕೆ ಯನ್ನು ನೀಡಿ ಗೌರವಿಸಿದರು.

ಬ್ರಹ್ಮಾವರ ವಲಯ ಅಧ್ಯಕ್ಷರಾದಾ ಶಾಕಿರ್ ಸಾಹೆಬ್ ರವರು ಸ್ವಾಗತಿಸಿ, ಮೊಹಮ್ಮದ್ ಮಸೂದ್ ರವರು ನಿರೂಪಣಾ ಗೈದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.