ಉಡುಪಿ: ಸದಾನಂದ ಗೌಡ ಮತ್ತು ಬಲಪಂಥೀಯ ವಿಚಾರಧಾರೆಗಳ ಪ್ರಚಾರಕ ಚಕ್ರವರ್ತಿ ಸೂಲಿಬೆಲೆ ನಡುವೆ ಶೀತಲ ಸಮರ ನಡೆಉಮಯುತ್ತಿದ್ದು, ಗಾಳಿ ಸುದ್ದಿ ಹರಡುವವರನ್ನು ದೇಶದ್ರೋಹಿಯೆಂದು ಸಚಿವ ಸದಾನಂದ ಗೌಡ ಚಕ್ರವರ್ತಿ ಸೂಲಿಬೆಲೆಯನ್ನು ಸಂಬೋಧಿಸಿ ಹೇಳಿಕೆ ನೀಡಿದ್ದರು.

ಇದೀಗ ಪೇಜಾವರ ಶ್ರೀ ಚಕ್ರವರ್ತಿ ಸೂಲಿಬೆಲೆ ಪರ ಬ್ಯಾಟ್ ಬೀಸಿದ್ದು,ಒಬ್ಬರ ಹೇಳಿಕೆಯ ಆಧಾರದಲ್ಲಿ ಯಾರು ದೇಶದ್ರೋಹಿಯಾಗುವುದಿಲ್ಲವೆಂದು ಹೇಳಿದ್ದಾರೆ.

ಸೂಲಿಬೆಲೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಯುವಕರನ್ನು ಒಗ್ಗೂಡಿಸುವ ಕೆಲಸ ನಡೆಸುತ್ತಿದ್ದಾರೆ. ಸದಾನಂದ ಗೌಡ ಕೂಡ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಅತೀ ಮುಖ್ಯ ಅಂದ್ರೆ ಸದಾನಂದ ಗೌಡ್ರು ಯಾರ ಹೆಸರು ಹೇಳಿ ದೇಶದ್ರೋಹಿ ಎನ್ನಲಿಲ್ಲ. ಏನೇ ಇರಲಿ ಯಾರಾದರೂ ದೇಶದ್ರೋಹಿ ಎಂದು ತಕ್ಷಣ ದೇಶದ್ರೋಹಿ ಆಗುವುದಿಲ್ಲವೆಂದು ಪೇಜಾವರ ಶ್ರೀ ಸೂಲಿಬೆಲೆ ಪರ ಧ್ವನಿಗೂಡಿಸಿದ್ದಾರೆ.

ಪ್ರವಾಹದ ಪೀಡಿತ ಪ್ರದೇಶಗಳಿಗೆ ಕೇಂದ್ರ ಸರಕಾರ ಪರಿಹಾರ ನೀಡುವಲ್ಲಿ ವಿಫಲವಾಗಿರುವ ಹಿನ್ನಲೆಯಲ್ಲಿ ಮೋದಿ ಸರಕಾರದ ಪ್ರಬಲ ಬೆಂಬಲಿಗ ಮೋದಿ ಮತ್ತು ಸಂಸದರ ವಿರುದ್ಧ ಖ್ಯಾತೆ ತೆಗೆದಾಗ ಸಂಸದರ ಮತ್ತು ಸೂಲಿಬೆಲೆಯ ನಡುವೆ ವಾಕ್ಸಮರ ಜೋರಾಗಿ ನಡೆಯುತ್ತಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.