ಪರಮೇಶ್ವರ್ ಪುತ್ರ ಲಿಂಗ ಬದಲಾವಣೆ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಪುತ್ರ ಶಾನ್  ತಮ್ಮ ಲಿಂಗ ಬದಲಾಯಿಸಿಕೊಂಡು ಶನಾ ಆಗಿ ಬದಲಾಗಿದ್ದಾರೆ.ಈ ಬಗ್ಗೆ ಖಾಸಗಿ ಆನ್ ಲೈನ್ ಪತ್ರಿಕೆಯೊಂದು ವರದಿ ಮಾಡಿದೆ.

ಪರಮೇಶ್ವರ್ ಕುಟುಂಬ ಈ ವಿಷಯ ತಿಳಿದು ಸ್ವಲ್ಪ ಗಾಬರಿಗೊಂಡಿದ್ದರೂ ಘಟನೆಯಾಗಿ ಒಂದು ತಿಂಗಳು ಕಳೆದ ಕಾರಣ ಈಗ ಎಲ್ಲರೂ ಶಾನಳೊಂದಿಗೆ ಹೊಂದಿಕೊಂಡು ಹೋಗುತ್ತಿದ್ದಾರೆಂದು ತಿಳಿದು ಬಂದಿದೆ.

ಕೆಲ ತಿಂಗಳ ಹಿಂದೆ ಶಾನ್ ಪರಮೇಶ್ವರ್ ವಿದೇಶದಲ್ಲಿ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಾರೆ. ತಮ್ಮ ಲಿಂಗ ಪರಿವರ್ತನೆ ಮಾಡಿಕೊಂಡ ಬಳಿಕ ಅವರು ಶನಾ ಅಂತ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ತಮ್ಮ ಫಾಲೋವರ್ಸ್ ಗಳಿಂದ ಸನಾ ಅಭಿನಂದನೆಗಳೂ ಮಹಾಪೂರವೇ ಹರಿದು ಬಂದಿದೆ, ಈ ಕೆಲಸ ಮಾಡು ಧೈರ್ಯ ಬೇಕು, ಜೊತೆಗೆ ಅವರಿಗೆ ನಾವೆಲ್ಲರೂ ಸಹಾಯ ಮಾಡಬೇಕು ಎಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ನಾನು ನನ್ನ ಜೀವನವನ್ನು ನೊಂದ ಮಹಿಳೆಯರ ಏಳಿಗೆಗಾಗಿ ಶ್ರಮಿಸಲು ಮುಡುಪಾಗಿರುವುದಾಗಿದತೆ ತಿಳಿಸಿದ್ದಾರೆ, ಸ್ವಯಂ ಸೇವಾ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಪ್ರಪಂಚದಲ್ಲಿ ಅತ್ಯಾಚಾರ, ಯುದ್ಧ ದೌರ್ಜನ್ಯಕ್ಕೊಳಗಾದ  ಮಹಿಳೆಯರ ಪರವಾಗಿ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ನನ್ನ ಜೀವನವನ್ನು ಸೆಟ್ ಅಪ್ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ, ಧ್ವನಿಯಿಲ್ಲದವರ ಪರವಾಗಿ ಒಂಟಿಯಾಗಿ ನಿಲ್ಲಬೇಕಿದೆ ಎಂದು ಹೇಳಿರುವ ಅವರು, ಯಾವುದೇ ಕಾರಣಕ್ಕೂ ಭಾರತಕ್ಕೆ ವಾಪಸ್ ಬರುವುದಿಲ್ಲ ಎಂದು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.