ಬಾಯಲ್ಲಿ ನೀರೂರಿಸುವ ಬಿಸಿ ಬಿಸಿ ಪಲಾವ್

133

ಪಲಾವ್ ತಯಾರಿಕೆಯಲ್ಲಿ ಹಲವು ವಿಧಗಳಿವೆ.ಪಲಾವು ತುಂಬಾ ರುಚಿಕರವಾದ ಆರೋಗ್ಯಕರ ಆಹಾರವಾಗಿದೆ.ಇದು ತಯಾರಿಸಲು ಕೇವಲ ಅರ್ಧ ಗಂಟೆ ಸಾಕಾಗುತ್ತದೆ.

ಪಲಾವು ಮಾಡುವ ವಿಧಾನ

2 ಈರುಳ್ಳಿ
ಕೊತ್ತಂಬರಿ ಸೊಪ್ಪು ಸ್ವಲ್ಪ
3 ಟೊಮೇಟೊ
ಉಪ್ಪು – ರುಚಿಗೆ ತಕ್ಕಷ್ಟು
2 ಕ್ಯಾರೆಟ್
ಸ್ವಲ್ಪ ಹಸಿ ಬಟಾಟೆ
1/2 ಹೂಕೋಸು
1/4 ಕೆಜಿ ಬೀನ್ಸ್.
2 ಲೋಟ ಅಕ್ಕಿ
1/4 ಚಮಚ ಅರಿಶಿನ
2 ಚಮಚ ತುಪ್ಪ
5 ಲೋಟ ನೀರು
1/2 ಚಮಚ ಸಾಸಿವೆ

ಪಲಾವು ತಯಾರಿಸುವ ವಿಧಾನ

ಪಲಾವ್ ಅನ್ನು ನೇರವಾಗಿ ಕುಕ್ಕರಿನಲ್ಲೇ ಮಾಡಬಹುದು. ಕುಕ್ಕರಿಗೆ ತೆಂಗಿನೆಣ್ಣೆಯನ್ನು ಹಾಕಿ, ಜೀರಿಗೆ, ಸಾಸಿವೆ ಹಾಕಿ ಹಾಕಿ ಒಗ್ಗರಿಸಬೇಕು.ಸಾಸಿವೆ ಸಿಡಿಯಲು ಇದಕ್ಕೆ ಮೊದಲೇ ಹೆಚ್ಚಿಟ್ಟ ತರಕಾರಿಗಳನ್ನೂ ಹಾಗೂ ಬಟಾಣಿಯನ್ನೂ ಹಾಕಿ 5 ನಿಮಿಷಗಳಕಾಲ ಕಲಕಬೇಕು.ನಂತರ ತೊಳೆದಿಟ್ಟ ಅಕ್ಕಿಯನ್ನೂ ಅದಕ್ಕೆ ಅಕ್ಕಿ ಬೇಯಲು ಬೇಕಾದಷ್ಟು ನೀರನ್ನೂ ಸೇರಿಸಬೇಕು.ಇದಕ್ಕೆ ಅರಿಶಿನ, ತುಪ್ಪ, ಉಪ್ಪು, ಹಾಗೂ ಬೇಯಿಸಿಟ್ಟಿದ್ದ ಮಸಾಲೆ ಮಿಶ್ರಣವನ್ನೂ ಸೇರಿಸಿ ಚೆನ್ನಾಗಿ ಕದಡಬೇಕು.ನಂತರ ಕುಕ್ಕರ್ ಮುಚ್ಚಿ ಒಂದು ವ್ಹಿಸಿಲ್ ಮಾತ್ರ ತರಿಸಬೇಕು.ಈಗ ಬಿಸಿ ಬಿಸಿ ಪಲಾವು ತಿನ್ನಲು ರೆಡಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.