ಪುಲ್ವಾಮ: ಪುಲ್ವಾಮ ಜಿಲ್ಲೆಯ ಹಾಲ್ ಎಂಬ ಊರಿನ ನಿವಾಸಿ ದಶಕದ ಹಿಂದೆ ವಲಸೆ ಹೋಗದಂತೆ ತಡೆದದ್ದು ಆತ ಸ್ವತಃ ಕಟ್ಟಿದ ಮನೆಯ ಮೇಲಿನ ಪ್ರೀತಿ! 1989 ರಲ್ಲಿ ಕಾಶ್ಮೀರ ಪಂಡಿತರ ಬಗ್ಗೆ ಹರಡಿದ್ದ ಸುಳ್ಳು ಸುದ್ದಿಯ ಆಧಾರದ ಮೇಲೆ ಊರಿಗೆ ಊರೇ ಕಾಲಿ ಮಾಡಿದ್ದರು. ಸ್ವತ: ಓಮ್ ಕಾರ್ ಭಟ್ ರವರ ಕುಟುಂಬದ ಎಲ್ಲ ಜನರು ವಲಸೆ ಹೋಗಿ ಉಳಿದದ್ದು ಅವರು ಮಾತ್ರವೇ ಆಗಿತ್ತು!

ತೋಟಗಾರಿಕೆ ಇಲಾಖೆಯಿಂದ ನಿವೃತ್ತರಾದ ಓಮ್ಕಾರ್ ಭಟ್ ತನ್ನ ಉಳಿಕೆಯ ಹಣದಿಂದ ಹೊಸ ಮನೆಯೊಂದನ್ನು ಖರೀದಿಸಿದ್ದರು. ಮನೆಯಲ್ಲಿ ವಾಸಿಸಬೇಕು. ಕುಟುಂಬದೊಂದಿಗೆ ಕಾಲ ಕಳೆಯಬೇಕೆನ್ನುವಷ್ಟರಲ್ಲಿ ಕಾಶ್ಮೀರದಲ್ಲಿ ಮಿಲಿಟೆಂಟ್ ಗಳ ಕಾರ್ಯಚಟುವಟಿಕೆ ಹೆಚ್ಚಾಗುತ್ತಿತ್ತು. ಆ ಸಮಯದಲ್ಲಿ ಒಂದು ಗಾಳಿ ಸುದ್ದಿ ಕೂಡ ವ್ಯಾಪಕವಾಗಿ ಹರಡಿತ್ತು. ಕಾಶ್ಮೀರ ಪಂಡಿತ ಯುವಕನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಮತ್ತು ದ್ರುಸು ಎಂಬ ಊರಿನಲ್ಲಿ ಮಹಿಳೆಯೊಬ್ಬರನ್ನು ಕೊಲ್ಲಲಾಯಿತು ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಕಾಶ್ಮೀರ ಪಂಡಿತರ ವಲಯದಲ್ಲಿ ಹರಡಲಾಯಿತು. ಈ ಗಾಳಿ ಸುದ್ದಿಯು ಕಾಶ್ಮೀರ ಪಂಡಿತರ ವಲಯದಲ್ಲಿ ಭಯದ ವಾತಾವರಣ ನಿರ್ಮಾಣವಾಯಿತು. ಇನ್ನು ಭೀಕರ ಪರಿಸ್ಥಿತಿ ನೀವು ಎದುರಿಸಲಿದ್ದೀರಿ ಎಂಬ ಭಿತ್ತಿ ಪತ್ರಗಳನ್ನು ಅಂಟಿಸಿ ಮಿಲಿಟೆಂಟ್ ಸಂಘಟನೆಗಳ ಹೆಸರಿನಲ್ಲಿ ಹಚ್ಚಿ ಇನ್ನಷ್ಟು ಆತಂಕ ಪಡುವಂತೆ ಮಾಡಲಾಗಿತ್ತು.

ಭಟ್ ಹೇಳುವ ಪ್ರಕಾರ, ಈ ಸನ್ನಿವೇಶದಲ್ಲಿ ಎಲ್ಲರೂ ಕೂಡ ಊರು ಬಿಡಲು ಸಜ್ಜಾಗಿದ್ದರು. ನನಗೂ ಊರು ಬಿಡುವಂತೆ ನನ್ನ ಸಂಬಂಧಿಕರು ಒತ್ತಾಯಿಸಿದರು. ಭಯದ ಕಾರಣ ಬಹುತೇಕ ಎಲ್ಲರೂ ದೇಶದ ನಾನಾ ರಾಜ್ಯಗಳಿಗೆ ಹಾಗೂ ಮುಖ್ಯವಾಗಿ ಜಮ್ಮುವಿನ ಕಡೆ ವಲಸೆ ಹೋದರು. ವಾಸ್ತವದಲ್ಲಿ ಯಾವ ಕಾಶ್ಮೀರದ ನಿವಾಸಿಗಳು ನಾವು ವಲಸೆ ಹೋಗುವಂತೆ ನಮ್ಮನ್ನು ಎಂದು ಬಲವಂತ ಪಡಿಸಿಲ್ಲವೆಂದು ಗತ ಇತಿಹಾಸವನ್ನು ನೆನಪು ಮಾಡಿಕೊಳ್ಳುತ್ತಾರೆ.

ಬಟಾಪುರ ಎಂಬ ಊರಿನಲ್ಲಿ ಸುಮಾರು 100 ಕಾಶ್ಮೀರ ಪಂಡಿತರ ವಾಸವಾಗಿತ್ತು. ಭಯದ ಕಾರಣ ಎಲ್ಲರೂ ಊರು ಬಿಟ್ಟು ಕೇವಲ 3 ನೆರೆಯ ಕುಟುಂಬಗಳು ಮಾತ್ರ 1994 ರ ವರೆಗೆ ವಾಸವಾಗಿತ್ತು ಎಂದು ಭಟ್ ನೆನಪಿಸಿಕೊಳ್ಳುತ್ತಾರೆ.

“ನನಗೆ ನನ್ನ ಊರು ಬಿಡಲು ಮನಸ್ಸಿರಲಿಲ್ಲ, ಆಗಷ್ಟೇ ನಾನು ಹೊಸ ಮನೆ ಖರೀದಿಸಿದ್ದೆ ಹಾಗೂ ಸ್ಥಳೀಯ ಮಿಲಿಟೆಂಟ್ ಆಗಿದ್ದ ಮುಹಮ್ಮದ್ ಆಯ್ಯುಬ್ ಪರ್ರೆ ಎಂಬತಾ ಯಾವುದೇ ಕಾರಣಕ್ಕೂ ನಿಮಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆಂದು ನನ್ನ ತಾಯಿಯ ಬಳಿ ಆತ ಆಭಯ ನೀಡಿದ್ದ. ಅದರಂತೆ ಅವನು ನಮಗೆ ಸಹಾಯ ಮಾಡಿದ” ಎಂದು ಭಟ್ ರಾಷ್ಟ್ರೀಯ ಮಾಧ್ಯಮಗಳೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

“ಆತ ಯಾವುದೇ ಕಾರಣಕ್ಕೂ ತಾನು ನೀಡಿದ ಮಾತನ್ನು ಮುರಿಯುವುದಿಲ್ಲ ಎಂಬ ಮಾತನ್ನು ಕೂಡ ನಮಗೆ ನೀಡಿದ್ದ” ಎಂದು ಒಮ್ಕಾರ್ ಭಟ್ ನಿರಾಳದರು.

“ಮನೆ ಕಾಶ್ಮೀರದ ಕಾಶ್ಮೀರದ ಸ್ಥಳೀಯ ವಿನ್ಯಾಸದಂತೆ ನಿರ್ಮಾಣ ಕೂಡ ಮಾಡಲಾಗಿತ್ತು. ನಮ್ಮ ನೆರಮನೆಯಲ್ಲಿದ್ದ ಕಾಶ್ಮೀರ ಪಂಡಿತರು ಈಗಿನವರೆಗೂ ತಮ್ಮ ಜಾಗವನ್ನು ಇಲ್ಲಿ ಇಟ್ಟುಕೊಂಡಿದ್ದರು. ಇತ್ತೀಚ್ಚಿಗೆ ಅವರು ಅದನ್ನು ಮಾರಟ ಮಾಡಿದರೆಂದು” ಭಟ್ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಇನ್ನು ಕೂಡ ಕಾಶ್ಮೀರದ ಭೂಮಿಯಲ್ಲಿ ವಾಸಿಸುತ್ತಿರುವ ಏಕಾಂಗಿ ಓಮ್ಕಾರ್ ಭಟ್, ಮಿಲಿಟೆಂಟ್ ನ ಸಹಾಯ, ತನ್ನ ಸ್ವಂತ ಮನೆ, ಈಗಿನ ಪರಿಸ್ಥಿತಿ ಎಲ್ಲವನ್ನು ನೆನೆದು ಭಾವೋದ್ರೆಕಗೊಳ್ಳುತ್ತಾರೆ!

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.