ಮುಂಬೈ : ಮುಂದಿನ ತಿಂಗಳು ಇಂಗ್ಲೆಂಡ್ ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಭಾರತ ಕ್ರೀಕೆಟ್  ತಂಡವನ್ನು ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಪ್ರಕಟಿಸಿದ್ದಾರೆ. ಮುಂಬೈಯಲ್ಲಿ ಸಭೆ ಸೇರಿದ ಆಯ್ಕೆ ಸಮಿತಿ ಆಡುವ 15ರ ಬಳಗವನ್ನು ಅಂತಿಮಗೊಳಿಸಿದ್ದಾರೆ.  ರನ್ ಮಿಷನ್ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.  ರೋಹಿತ್ ಶರ್ಮಾ(ಉಪನಾಯಕ) ಆಯ್ಕೆಯಾಗಿದ್ದಾರೆ.

ಕಾಫಿ ವಿಥ್ ಕರಣ್ ಶೋ ವಿವಾಧದಲ್ಲಿ ಸಿಲುಕಿ ತಂಡದಿದಂದ ಹೊರಗುಳಿದಿದ್ದ ಕರ್ನಾಟಕದ  ಕೆ.ಎಲ್ ರಾಹುಲ್  ಹಾಗೂ ಹಾರ್ದಿಕ್ ಪಾಂಡ್ಯ ತಂಡಕ್ಕೆ ಆಯ್ಕೆಯಾಗಿದ್ದು ಇಂಗ್ಲೆಂಡ್ ಟೂರ್’ಗೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೇಯೆ ಬ್ಯಾಟಿಂಗ್ ವಿಭಾಗದಲ್ಲಿ ಆರಂಭಿಕರಾಗಿ ಶಿಖರ್ ಧವನ್, ರೋಹಿತ್ ಶರ್ಮಾ, ಕೆ ಎಲ್ ರಾಹುಲ್ ಮೂವರು ಸ್ಥಾನ ಗಿಟ್ಟಿಸಿದ್ದಾರೆ  ಉಳಿದಂತೆ ಟೀಂ ನಲ್ಲಿ ವೇಗದ ಬೌಲರ್ ಆಗಿ ಮಹಮ್ಮದ್ ಶಮಿ, ಜಸ್ ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಆಯ್ಕೆಯಾದರೆ ಸ್ರಿನ್ ವಿಭಾಗದಲ್ಲಿ ಕುಲದೀಪ್ ಯಾಧವ್, ಯಜುವೇಂದ್ರ ಚಹಲ್ ಆಯ್ಕೆ ಯಾಗಿದ್ದಾರೆ. ತಂಡದಲ್ಲಿ ವಿಜಯ್ ಶಂಕರ್, ಕೇದರ್ ಜಾದವ್, ಹಾರ್ದಿಕ್ ಪಾಂಡ್ಯ,  ರವೀಂದ್ರ ಜಡೇಜಾ ಆಲ್ ಗ್ರೌಂಡರ್ ವಿಬಾಗದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ವಿಕೇಟ್ ಕೀಪರ್ ಆಗಿ ಎಂ ಎಸ್ ದೋನಿ ಮತ್ತು ದಿನೇಶ್ ಕಾರ್ತಿಕ್ ಸ್ಥಾನ ಗಿಟ್ಟಿಸಿದ್ದಾರೆ.

ಇಂಡಿಯಾ ತಂಡ ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ(ಉಪನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ವಿಜಯ್ ಶಂಕರ್, ಕೇದಾರ್ ಜಾದವ್, ದಿನೇಶ್ ಕಾರ್ತಿಕ್, ಎಂಎಸ್ ಧೋನಿ, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಾಲ್, ಜಸ್ ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ಆಟಗಾರರಾಗಿ ನೇಮಕಗೊಂಡಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.