ಚೆನೈ: ಕಳೆದ ವರ್ಷ ವುಹಾನ್ ಸಮ್ಮೇಳನದ ಭೇಟಿಯಾಗಿದ್ದ ಮೋದಿ ಮತ್ತು ಚೀನಾದ ಅಧ್ಯಕ್ಷ ಝಿ ಜಿಂಗ್ಪಿನ್ ಅಕ್ಟೋಬರ್ 11 ಮತ್ತು 12 ಕ್ಕೆ ಚೈನೈನ ಕರಾವಳಿ ತೀರದ ಮಮಲ್ಲಪುರಮ್ ನಲ್ಲಿ ಔಪಚಾರಿಕವಾಗಿ ಭೇಟಿಯಾಗಲಿದ್ದಾರೆ.

ಏಷ್ಯಾದ ಎರಡು ದೊಡ್ಡ ರಾಷ್ಟ್ರಗಳ ನಾಯಕರುಗಳ ಭೇಟಿ ಹಲವಾರು ಚರ್ಚೆಗಳಿಗೆ ನಾಂದಿಯಾಗಲಿದೆಯೆಂದು ವಿಶ್ಲೇಷಿಸಲಾಗುತ್ತಿದೆ. ಈ ಸಭೆಯು ದ್ವಿಪಕ್ಷೀಯ ಮಾತುಕತೆ,ಪ್ರಾದೇಶಿಕ ವಿಚಾರ ಮತ್ತು ಅಂತರಾಷ್ಟ್ರೀಯ ಪ್ರಾಮುಖ್ಯತೆಯ ಬಗ್ಗೆ ಮುಖ್ಯವಾಗಿ ಚರ್ಚೆಗಳು ನಡೆಯಲಿವೆಯೆಂದು ವಿದೇಶಾಂಗ ಸಚಿವರು ತಿಳಿಸಿದ್ದಾರೆ.

ಈ ಮುಂಚೆ ಚೀನಾ ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವಿನ ಸಮಸ್ಯೆ ಬಗೆಹರಿಯಬೇಕೆಂದು ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.