ಬೆಂಗಳೂರು:ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯಕ್ಕೆ ಈಗಾಗಲೇ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನೊಳಗೊಂಡ ಉನ್ನತ ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ ಪ್ರೊ. ಸುಧೀರ್ ಕೃಷ್ಣಸ್ವಾಮಿಯವರನ್ನು ಉಪ ಕುಲಪತಿಯನ್ನಾಗಿ ನೇಮಿಸುವುದರ ಬಗ್ಗೆ ನಿರ್ಧರಿಸಲಾಗಿತ್ತು. ಇದೀಗ ಹೊಸ ಬೆಳವಣಿಗೆಯಲ್ಲಿ ಅವರ ನೇಮಕಾತಿ ವಿಳಂಬತೆಯ ಹಿಂದೆ ರಾಜಕೀಯ ನಡೆಯುತ್ತಿರುವುದು ಕಂಡು ಬಂದಿದೆ. ಆ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಯ್ಕೆ ಸಮಿತಿಯ ನಿರ್ಧಾರದಂತೆ ಪ್ರೊ.ಸುಧೀರ್ ಕೃಷ್ಣ ಸ್ವಾಮಿಯವರನ್ನು ಉಪ ಕುಲಪತಿಯಾಗಿ ನೇಮಿಸುವಂತೆ ಒತ್ತಾಯಿಸಿ ತರಗತಿಗಳನ್ನು ಬಹಿಷ್ಕರಿಸಿ ಸೆ.20 ರ ಶುಕ್ರವಾರದಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಆದರೆ ಇದೀಗ ಆಯ್ಕೆ ಸಮಿತಿಯಲ್ಲಿದ್ದ ವಿಶೇಷ ಆಮಂತ್ರಿತ ಸರ್ವೋಚ್ಚ ನ್ಯಾಯಾಲಯದ ಮೂವರು ನ್ಯಾಯಾಧೀಶರನ್ನು ಹೊರತು ಪಡಿಸಿ ಸೆ.28 ರಂದು ಸಭೆ ನಡೆಸಿ ಮತ್ತೊಂದು ನಿರ್ಧಾರ ಕೈಗೊಳ್ಳುವ ಸಾಧ್ಯತೆಯ ಬಗ್ಗೆ ತಿಳಿದು ಬಂದಿದೆ.

ಈ ನಿರ್ಧಾರವು ರಾಜಕೀಯ ಪ್ರೇರಿತದಂತೆ ಕಂಡು ಬಂದಿದ್ದು ಕೂಡಲೇ ವಿಶ್ವವಿದ್ಯಾಲಯದ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಉನ್ನತ ಆಯ್ಕೆ ಸಮಿತಿಯ ಶಿಫಾರಸ್ಸಿನಂತೆ ಪ್ರೊ. ಸುಧೀರ್ ಕೃಷ್ಣ ಸ್ವಾಮಿಯವರನ್ನು ಉಪ ಕುಲಪತಿಯಾಗಿ ನೇಮಿಸುವಂತೆ ಎಸ್.ಐ.ಓ ಕರ್ನಾಟಕ ಆಗ್ರಹಿಸಿದೆ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.