ಮಂಗಳೂರು: ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ಹೊಗಳಿರುವ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ, ನಿರ್ಮಲ ಸೀತಾರಾಮನ್ ಅವರು ಪ್ರಸ್ತುತ ಪಡಿಸಿರುವ ಸಾಲ ಮೇಳ ಕಾರ್ಯಕ್ರಮವನ್ನು ಹೊಗಳಿದ್ದಾರೆ.

ಇಂದಿರಾ ಗಾಂಧಿಯವರ ಸರಕಾರದಲ್ಲಿ ಜನಾರ್ಧನ ಪೂಜಾರಿ ವಿತ್ತ ಸಚಿವರಾಗಿದ್ದಾಗ ಸಾಲ ಮೇಳ ಕಾರ್ಯಕ್ರಮ ಆಯೋಜಿಸಿ ಜನಪ್ರಿಯರಾಗಿದ್ದನು ಸ್ಮರಿಸಿಕೊಂಡ ಅವರು, ಇಂದಿರಾ ಗಾಂಧಿಯಷ್ಟೇ ನಿರ್ಮಲ ಸೀತರಾಮನ್ ದಿಟ್ಟೆ ಎಂದು ಹೊಗಳಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸಾಥ್ ನೀಡಲಿ ಎಂದಿರುವ ಅವರು ದೇವನು ಪ್ರಧಾನಿಯನ್ನು ಮತ್ತು ಅವರ ಸಚಿವ ಸಂಪುಟಕ್ಕೆ ಆಶೀರ್ವಾದ ನೀಡಲಿ ಎಂದು ಹೇಳಿದ್ದಾರೆ.

ನಿರ್ಮಲ ಸೀತಾರಾಮನ್ ಅವರಿಗೂ ಸಾಲ ಮೇಳೆದ ಬಗ್ಗೆ ಟೀಕೆಗಳು ಎದುರಾಗಬಹುದು. ಇಂದಿರಾ ಗಾಂಧಿಯವರನ್ನು ಆ ಸಂದರ್ಭದಲ್ಲಿ ಟೀಕಿಸಿದ್ದರು ಎಂದು ತುಲನೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.