ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ವಿಶೇಷವಾಗಿ ಪ್ರೇಮಿಗಳ ದಿನ ಆಚರಿಸಿದ ನಿಖಿಲ್​-ರೇವತಿ

0
100

ಬೆಂಗಳೂರು: ಸಿನಿಮಾ ಮತ್ತು ರಾಜಕೀಯದಿಂದ ಕೊಂಚ ವಿರಾಮ ಪಡೆದುಕೊಂಡು ಮದುವೆ ತಯಾರಿಯಲ್ಲಿರುವ ಬ್ಯುಜಿ ಯಾಗಿರುವ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್​ ಕುಮಾರಸ್ವಾಮಿ ನಿಶ್ಚಿತಾರ್ಥದ ಬಳಿಕ ಭಾವಿ ಪತ್ನಿ ರೇವತಿಯೊಂದಿಗೆ ವಿಶೇಷವಾಗಿ ಪ್ರೇಮಿಗಳ ದಿನವನ್ನು ಆಚರಿಸಿದರು.

ಇಂದು ರೇವತಿಯೊಂದಿಗೆ ರಾಜರಾಜೇಶ್ವರಿ ನಗರದ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ವಿಶೇಷವಾದ ಪೂಜೆಯನ್ನು ಸಲ್ಲಿಸಿದರು. ಈ ಮೂಲಕ ತಮ್ಮ ಮೊದಲ ಪ್ರೇಮಿಗಳ ದಿನವನ್ನು ಸಾಂಪ್ರದಾಯಿಕವಾಗಿಯೇ ಆಚರಿಸಿಕೊಂಡರು. ಬಳಿಕ ದೇವಸ್ಥಾನದಲ್ಲಿ ಸಾಮಾನ್ಯರಂತೆ ಸಾಲಿನಲ್ಲಿ ಕುಳಿತು ಬಾಳೆ ಎಲೆಯಲ್ಲಿ ಪ್ರಸಾದವನ್ನು ಸೇವಿಸಿದರು.

ಇದೇ ವೇಳೆ ನೂತನ ಜೋಡಿಯೊಂದಿಗೆ ಕುಟುಂಬದ ಸದಸ್ಯರು ಕೂಡ ಭಾಗಿಯಾಗಿದ್ದರು. ವಿಶೇಷ ಭೇಟಿಯ ಫೋಟೋಗಳನ್ನು ನಿಖಿಲ್​ ತಮ್ಮ ಫೇಸ್​ಬುಕ್​ನಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದು, ವಿಶ್ವ ಪ್ರೇಮಿ ದಿನಾಚರಣೆಯ ಈ ದಿನದಂದು ಆ ತಾಯಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ನಾನು ಹಾಗು ರೇವತಿಯವರು ಅಮ್ಮನ ಆಶೀರ್ವಾದ ಪಡೆದ ಸುಂದರ ಕ್ಷಣಗಳು ಎಂದು ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here