ಟೌನ್ಟನ್​: ನ್ಯೂಜಿಲೆಂಡ್​ನ ಜೇಮ್ಸ್​​ ನೇಶಮ್​​ (5) ಮತ್ತು ಲೂಕಿ ಫರ್ಗೂಸನ್ (4)​​ ಅವರ ಅದ್ಭುತ ಕೈಚಳಕದಿಂದ ವಿಶ್ವಕಪ್​ನ 13ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಕಡಿಮೆ ಮೊತ್ತಕ್ಕೆ ಆಲೌಟ್​​ ಆಗಿದೆ.

ಇಲ್ಲಿನ ದಿ ಕಾಪರ್​​​​​​​​​​ ಆಸೋಸಿಯೇಷನ್​​​​​​​​​ ಕೌಂಟಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​​ ಸೋತು ಬ್ಯಾಟಿಂಗ್​​ ಮಾಡಿದ ಅಫ್ಘಾನಿಸ್ತಾನ ತೀರಾ ಕಳಪೆ ಆಟದೊಂದಿಗೆ 41.1 ಓವರ್​ಗಳಲ್ಲಿ ಆಲೌಟ್​​​ ಆಗಿ ಕಿವೀಸ್​ ಪಡೆಗೆ 172 ರನ್​ಗಳ ಗುರಿ ನೀಡಿತು.

ಆರಂಭಿಕರಾದ ಹಜರಾತುಲ್ಹಾ ಜಾಜಿ (34), ನೂರ್​​ ಆಲಿ ಜಾರ್ಡನ್​​​​ (31) ಮತ್ತು ಹಶಾಮತಲ್ಹಾ ಶಹೀದಿ (59) ಉತ್ತಮ ಆಟವಾಡಿದರೆ ಉಳಿದ ಬ್ಯಾಟ್ಸ್​​ಮನ್​ಗಳು ತೀರಾ ಕಳಪೆ ಪ್ರದರ್ಶನ ತೋರಿ ಶೀಘ್ರ ಔಟಾದರು. ಈ ಮೂಲಕ ಕಿವೀಸ್​ ತಂಡಕ್ಕೆ ಅಲ್ಪ ಮೊತ್ತದ ಗುರಿ ನೀಡಿತು.

ನ್ಯೂಜಿಲೆಂಡ್​​ ಪರ ಬೌಲಿಂಗ್​​ ಮಾಡಿದ ಜೇಮ್ಸ್​ ನೇಶಮ್​​ 5, ಲೂಕಿ ಫರ್ಗೂಸನ್ 4 ಹಾಗೂ ಕಾಲಿನ್​​ ಡಿ ಗ್ರ್ಯಾಂಡ್​​​​​​​ಹೋಮ್​​​​ ಒಂದು ವಿಕೆಟ್​​ ಪಡೆದು ಎದುರಾಳಿ ತಂಡದ ರನ್​​ ಹೊಳೆಗೆ ಕಡಿವಾಣ ಹಾಕಿದರು.

ನಂತರ 173 ರನ್ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಮೂರು ವಿಕೆಟ್ ಕಳೆದುಕೊಂಡು 32.1 ಒವರ್ ನಲ್ಲಿ ಸುಲಭವಾಗಿ ಗುರಿ ಮುಟ್ಟಿತು. ವಿಲಿಯಮ್ಸನ್ (79) ಮತ್ತು ರೋಸ್ ಟೈಲರ್ 48 ತಂಡಕ್ಕೆ ಉತ್ತಮ ಕೊಡುಗೆ ನೀಡಿ ಸುಲಭವಾಗಿ ಗುರಿ ಮುಟ್ಟುವಂತೆ ನೋಡಿಕೊಂಡರು. ಅಫಘಾನಿಸ್ತಾನದ ಅಫ್ತಾಬ್ ಅಲಾಮ್ ಮಾತ್ರ ಮೂರು ವಿಕೆಟ್ ಪಡೆಯುವಲ್ಲಿ ಸಫಲರಾದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.