ಮ್ಯಾಂಚೆಸ್ಟರ್‌: ನಿನ್ನೆ ಮಳೆ ಬಂದು ಅರ್ಧದಲ್ಲಿ ನಿಂತ ಪಂದ್ಯ ಇಂದು ಮುಂದುವರಿಸಲಾಗಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ನ್ಯೂಝಿಲೆಂಡ್ ಎಂಟು ವಿಕೆಟ್ ಕಳೆದುಕೊಂಡು 239 ರನ್ ಪೇರಿಸಿತ್ತು. ನ್ಯೂಝಿಲೆಂಡ್ ಪರ ವಿಲಿಯಮ್ಸನ್ 67 ಮತ್ತು ಟೈಲರ್ 74 ರನ್ ಬಾರಿಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೊನೆಯಲ್ಲಿ ಬಾಲಂಗೋಚಿಗಳೆಲ್ಲ ಸೇರಿ ತಂಡದ ಮೊತ್ತ 239 ರನ್ ಆಗುವಂತೆ ನೋಡಿಕೊಂಡರು. ಭಾರತದ ಪರ ಭುವನೇಶ್ವರ್ ಕುಮಾರ್ ಮೂರು ವಿಕೆಟ್ ಪಡೆದರು.

ಆದರೆ ಈ ಅಲ್ಪ ಮೊತ್ತ ಬೆನ್ನಟ್ಟಿದ ಭಾರತ ಬೊಲ್ಟ್ ಮತ್ತು ಹೆನ್ರಿ ದಾಳಿಗೆ ಒಳಗಾಗಿ ಭಾರತದ ಪ್ರಮುಖ ಆಟಗಾರರದ ರೋಹಿತ್ ಶರ್ಮಾ, ಕೊಹ್ಲಿ ಮತ್ತು ರಾಹುಲ್ ತಂಡದ ಮೊತ್ತ 5 ಆಗುದೊರಳಗೆ ಪೆವಿಲಿಯನ್ ಸೇರಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಇನ್ನು ಪಂತ್ ಅನಗತ್ಯ ಹೊಡೆತಕ್ಕೆ ಹೋಗಿ ಪ್ರಮುಖ ಘಟ್ಟದಲ್ಲಿ ಔಟಾದರು. ಕೊನೆಯಲ್ಲಿ ನೂರು ರನ್ ಜೊತೆಯಾಟ ನಡೆಸಿದ ಧೋನಿ ಮತ್ತು ಜಡೇಜಾ ಭಾರತದ ಗೆಲುವಿನ ಆಸೆ ಹುಟ್ಟಿಸಿದರಾದರು ಇವರಿಬ್ಬರು ಔಟಗುದರೊಂದಿಗೆ ಪಂದ್ಯ ಸಂಪೂರ್ಣವಾಗಿ ನೆಲಕಚ್ಚಿತು ಕೊನೆಯಲ್ಲಿ ಬಾಲಂಗೋಚಿಗಳು ವಿಕೆಟ್ ಒಪ್ಪಿಸುದರೊಂದಿಗೆ 221 ರನ್ನಿಗೆ ಅಲೌಟಾಗಿ ವಿಶ್ವಕಪ್ ಗೆಲ್ಲುವ ಕನಸು ಭಗ್ನವಾಯಿತು. ನ್ಯೂಝಿಲೆಂಡ್ ಪರ ಮಾರಕ ದಾಳಿ ಸಂಘಟಿಸಿದ ಹೆನ್ರಿ ಮೂರು ವಿಕೆಟ್ ಕಿತ್ತು ಭಾರತವನ್ನು ಆರಂಭದಲ್ಲೇ ನೆಲಕಚ್ಚುವಂತೆ ಮಾಡಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.