ನವದೆಹಲಿ: ನೂತನ ಶಿಕ್ಷಣ ನೀತಿಯ 2019 ರ ಬಗ್ಗೆ ಕೇಂದ್ರ ಸರಕಾರ ಅಭಿಪ್ರಾಯ ಮಂಡಿಸಲು ನಿಗದಿ ಪಡಿಸಿರುವ ದಿನಾಂಕವನ್ನು ವಿಸ್ತರಿಸುವಂತೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ ಕರ್ನಾಟಕದ ರಾಜ್ಯಾಧ್ಯಕ್ಷರಾದ ನಿಹಾಲ್ ಕಿದಿಯೂರು ಆಗ್ರಹಿಸಿದ್ದಾರೆ.

ಸಮಾಲೋಚನೆಯ ಮೂಲಕ ಒಂದು ನೀತಿಯನ್ನು ಜಾರಿಗೆ ತಂದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೆಚ್ಚು ಪರಿಗಣಿಸಲ್ಪಡುತ್ತದೆ. ಮತ್ತು ಅತೀ ಮುಖ್ಯವಾಗಿ ನೂತನ ಶಿಕ್ಷಣ ನೀತಿಯ ಕರಡನ್ನು ಕನ್ನಡ ಭಾಷೆಯಲ್ಲೂ ಪ್ರಕಟಿಸಬೇಕು ಇದರಿಂದಾಗಿ ರಾಜ್ಯದ ಜನತೆಗೂ ಈ ನೀತಿಯನ್ನು ಅರಿಯಲು ಸಹಕರಿಯಾಗುತ್ತದೆಂದು ನಿಹಾಲ್ ವಿನಂತಿಸಿದ್ದಾರೆ.

ಕಸ್ತೂರಿ ರಂಗನ್ ನೇತೃತ್ವದ ಸಮಿತಿ ರೂಪಿಸಲ್ಪಟ್ಟ ನೂತನ ಶಿಕ್ಷಣ ನೀತಿ 2019 ರ ಕರಡಿನ ಬಗ್ಗೆ ಜೂನ್ ಅಂತ್ಯದೊಳಗೆ ಅಭಿಪ್ರಾಯ ಮಂಡಿಸಲು ತಿಳಿಸಲಾಗಿದೆ. ನೂತನ ಶಿಕ್ಷಣ ನೀತಿಯು ಸುಮಾರು 500 ಪುಟಗಳನ್ನು ಹೊಂದಿದ್ದು ಇದರ ಬಗ್ಗೆ ಸೂಕ್ತವಾದ ಅಧ್ಯಯನ, ಚರ್ಚೆ, ಸಮಾಲೋಚನೆ ನಡೆಸಿ ಅಭಿಪ್ರಾಯ ಮಂಡಿಸಬೇಕಾಗಿರುವುದರಿಂದ ಇದರ ಸಮಯಾವಕಾಶವನ್ನು ವಿಸ್ತರಿಸಬೇಕೆಂದು ಎಸ್.ಐ.ಓ ಆಗ್ರಹಿಸುತ್ತದೆಯೆಂದು ನಿಹಾಲ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.