ನೇಜಾರು: ಐಸಿಸಿ ಪುಟಾಣಿಗಳ ಸಮ್ಮರ್ ಕ್ಯಾಂಪ್ ಉದ್ಘಾಟನೆ

55

ನೇಜಾರು: ಸ್ಟೂಡೆಂಡ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ ಹೂಡೆ ಇದರ ವತಿಯಿಂದ ನೇಜಾರಿನ ಜ್ಯೋತಿ ನಗರ 7 ನೇ ಅಡ್ಡ ರಸ್ತೆಯಲ್ಲಿ ಇಸ್ಲಾಮಿಕ್ ಚಿಲ್ಡ್ರನ್ ಸರ್ಕಲ್ (ಐಸಿಸಿ) ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಬೇಸಿಗೆ ಶಿಬಿರದ ಉದ್ಘಾಟನೆಯನ್ನು ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ಅಧ್ಯಕ್ಷರಾದ ಅಬ್ದುಲ್ ಕಾದೀರ್ ಮೊಯ್ದಿನ್ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ನ ಸದಸ್ಯರಾದ ಮೌಲನ ಆದಮ್ ಸಾಹೇಬ್ ಬೇಸಿಗೆ ಶಿಬಿರದ ಮಹತ್ವವನ್ನು ತಿಳಿಸಿದರು. ಈ ಬೇಸಿಗೆ ಶಿಬಿರದಲ್ಲಿ ಮಕ್ಕಳ ಅಭಿರುಚಿಗೆ ತಕ್ಕಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಇಸ್ಲಾಮಿನ ಬುನಾದಿ ಶಿಕ್ಷಣದೊಂದಿಗೆ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿ ಬೆಳೆಸುವುದು ಮುಖ್ಯ ಉದ್ದೇಶವೆಂದು ಎಸ್.ಐ.ಓ ಹೂಡೆ ಘಟಕದ ಅಧ್ಯಕ್ಷ ನಾಸಿರ್ ಗುಜ್ಜರ್ ಬೆಟ್ಟು ತಿಳಿಸಿದ್ದಾರೆ. ಈ ಶಿಬಿರದಲ್ಲಿ ಸುಮಾರು 50 ಮಕ್ಕಳು ಪಾಲ್ಗೊಂಡಿದ್ದಾರೆ.

ಈ ಸಮದರ್ಭದಲ್ಲಿ ಯುನೂಸ್ ನೇಜಾರ್, ಅತಾವುಲ್ಲಾ ಹೂಡೆ, ಶಾನ್ ಹೂಡೆ, ವಾಸೀಮ್, ರಯಾಝ್ ನೇಜಾರ್ ,ಅಫ್ಜಲ್ ಹೂಡೆ, ಅಲ್ತಾಫ್ ನಕ್ವಾ, ರಝಾಕ್ ನಕ್ವಾ,ಡಾ.ಫಹೀಮ್ ಮುತಾಂದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.