ನವದೆಹಲಿ: ಮುಂಬರುವ 2024ರ ವರೆಗೆ ಭಾರತ 5 ಟ್ರಿಲಿಯನ್ ಡಾಲರ್ ಗಳಿಕೆ ಪಡಯಬೇಕೆಂದು ನೀತಿ ಆಯೋಗದ ಸಭೆಯಲ್ಲಿ ಸೇರಿದ್ದ ರಾಜ್ಯಗಳ ಮುಖ್ಯಮಂತ್ರಿಗಳ ಮುಂದೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಸುಧಾರಣೆಗಾಗಿ ಉನ್ನತ ಮಟ್ಟದಲ್ಲಿ ಕೃಷಿ ಕ್ಷೇತ್ರದಲ್ಲೂ ರಚನಾತ್ಮಕ ಬದಲಾವಣೆ ಮಾಡಲಾಗುವುದು. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಪರಿಹಾರ ನಿಧಿ ಬಿಡುಗಡೆಯ ಬಗ್ಗೆ ಸುಧಾರಿತ ನಿಯಮ ಜಾರಿಗೆ ತರುವ ಬಗ್ಗೆ ಮಾತನಾಡಿದರು.

2024 ರ ವರೆಗೆ ಐದು ಟ್ರಿಲಿಯನ್ ಅರ್ಥಿಕ ಗಳಿಕೆ ಸವಾಲಾಗಿದೆ ಆದರೆ ಅಸಾಧ್ಯವಲ್ಲವೆಂದು ರಾಜ್ಯದ ಮುಖ್ಯಮಂತ್ರಿಗಳನ್ನು ಹುರಿದುಂಬಿಸಿದ್ದಾರೆ. ತಮ್ಮ ರಾಜ್ಯದ ಆದಾಯವನ್ನು 2 ರಿಂದ 2.5 ಪಟ್ಟು ಹೆಚ್ಚಿಸಲು ಪರಿಶ್ರಮ ಪಡಯಬೇಕೆಂದು ಸಲಹೆ ನೀಡಿದರು. ಇದಕ್ಕಾಗಿ ಜಿಲ್ಲಾ ಮಟ್ಟದಿಂದ ಕೆಲಸ ನಿರ್ವಹಿಸಬೇಕೆಂದು ಮೋದಿ ಹೇಳಿದ್ದಾರೆ.

ಪಂಜಾಬ್,ತೆಲಂಗಾಣ, ಹಿಮಾಚಲ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬಿಟ್ಟು ಮತ್ತೆಲ್ಲ ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.