ಸ್ಕ್ರೋಲ್ ತನಿಖೆ: ಅಮಿತ್ ಶಾ ಎನ್.ಸಿ.ಆರ್ ಪ್ರಕ್ರಿಯೆಯನ್ನು ಎನ್.ಪಿ.ಆರ್ ನೊಂದಿಗೆ ಆರಂಭ!

0
295

ಕೋಸ್ಟಲ್ ಮಿರರ್ ಫೋಕಸ್:

ಕೃಪೆ: ಸ್ಕ್ರೋಲ್.ಇನ್

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ಕುರಿತು ಭಾರತದಾದ್ಯಂತ ಪ್ರತಿಭಟನೆಗಳು ಹೆಚ್ಚಾಗುತ್ತಿದ್ದಂತೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು(NPR) ಜಾರಿಗೆ ತರುವ ಅಪ್ರಜ್ಞಾಪೂರ್ವಕ ಅಧಿಕಾರಶಾಹಿ ಪ್ರಕ್ರಿಯೆಯು ಹಲವೆಡೆ ಕೋಲಾಹಲ ಎಬ್ಬಿಸಿದೆ. ಪಶ್ಚಿಮ ಬಂಗಾಳದಲ್ಲಿ, ಮಮತಾ ಬ್ಯಾನರ್ಜಿ ಸರ್ಕಾರವು “ಸಾರ್ವಜನಿಕ ಹಿತಾಸಕ್ತಿಯನ್ನು” ಉಲ್ಲೇಖಿಸಿ ಸೋಮವಾರ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ ಪ್ರಕ್ರಿಯೆಯನ್ನು ನಿಲ್ಲಿಸಲು ಆದೇಶಿಸಿದ್ದಾರೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಬೇರೆಡೆ ಹೆಚ್ಚಿನ ಪ್ರತಿರೋಧ ಉಂಟುಮಾಡಿಲ್ಲವಾದರೂ, ಪಶ್ಚಿಮ ಬಂಗಾಳದಲ್ಲಿ, ಕಾರ್ಯಕರ್ತರು ಮತ್ತು ಪ್ರತಿಭಟನಾಕಾರರು ಈ ಪ್ರಕ್ರಿಯೆಯನ್ನು ವ್ಯಾಪಕವಾಗಿ ವಿರೋಧಿಸಿದ್ದಾರೆ. ಇದು ನಿಜಕ್ಕೂ ಅಖಿಲ ಭಾರತ ನಾಗರಿಕರ ನೋಂದಣಿಯನ್ನು(NRC) ರಚಿಸುವ ಮೊದಲ ಹೆಜ್ಜೆಯಾಗಿದೆ ಎಂಬುವುದು ಅವರ ಆರೋಪವಾಗಿದೆ. ನಾಗರಿಕರ ರಾಷ್ಟ್ರೀಯ ನೋಂದಣಿ ವಿವಾದಾಸ್ಪದವಾಗಿದೆ: ಅಕ್ರಮ ವಲಸಿಗರನ್ನು ಗುರುತಿಸುವುದು ಇದರ ಉದ್ದೇಶಿತ ಗುರಿಯಾಗಿದ್ದರೂ, ನಿಜವಾದ ಭಾರತೀಯ ನಾಗರಿಕರನ್ನು ಅನಿಯಂತ್ರಿತವಾಗಿ ಹೊರಗಿಡಬಹುದೆಂಬ ಆತಂಕಗಳಿವೆ. ಈ ಕಳವಳಗಳನ್ನು ನಿರ್ಲಕ್ಷಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ 2024 ರ ಮೊದಲು ರಾಷ್ಟ್ರವ್ಯಾಪಿ ಎನ್‌ಆರ್‌ಸಿಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.

ರಾಷ್ಟ್ರೀಯ ಜನತಾ ನೋಂದಣಿಗೆ ರಾಷ್ಟ್ರೀಯ ನಾಗರಿಕರ ನೋಂದಣಿಗೆ ಯಾವುದೇ ಸಂಬಂಧವಿಲ್ಲ ಮತ್ತು NPR ಜನಗಣತಿಯ ಭಾಗವಾಗಿದೆ ಎಂದು ಭಾರತೀಯ ಜನತಾ ಪಕ್ಷ ವಾದಿಸಿದೆ. ಸ್ಕ್ರೋಲ್.ಇನ್ ಅಂತರ್ಜಾಲ ಮಾಧ್ಯಮ ಈ ಬಗ್ಗೆ ತಜ್ಞರೊಂದಿಗೆ ಚರ್ಚಿಸಿದೆ.ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ ಸುತ್ತಲಿನ ಕಾನೂನು ಆದೇಶಗಳನ್ನು ಪರಿಶೀಲಿಸಿ ಬಿಜೆಪಿಯವರ ವಾದ ನಿಜವಲ್ಲ ಎಂಬುವುದನ್ನು ಕಂಡುಹಿಡಿದಿದೆ. ಈ ಸತ್ಯಶೋಧನಾ ವರದಿಯಲ್ಲಿ ಸ್ಕ್ರೋಲ್.ಇನ್ ಎನ್‌ಪಿಆರ್‌ಗೂ ಜನಗಣತಿಗೆ ಯಾವುದೇ ಸಂಬಂಧವಿಲ್ಲ ಮತ್ತು ವಾಸ್ತವವಾಗಿ, ಉದ್ದೇಶಿತ ಅಖಿಲ ಭಾರತ ಎನ್‌ಆರ್‌ಸಿಗೆ ನೇರವಾದ ಸಂಬಂಧ ಇದೆಯೆಂಬ ವಿಚಾರ ಬಹಿರಂಗ ಮಾಡಿದೆ.

ಎನ್‌ಪಿಆರ್ ಎಂದರೇನು?

ಕೇಂದ್ರ ಸರ್ಕಾರವು ಪ್ರಕಟಿಸಿದ ಆನ್‌ಲೈನ್ ಮಾಹಿತಿಯ ಪ್ರಕಾರ, ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ ಉದ್ದೇಶ “ದೇಶದ ಪ್ರತಿಯೊಬ್ಬ ಸಾಮಾನ್ಯ ನಿವಾಸಿಗಳ ಸಮಗ್ರ ಗುರುತಿನ ದತ್ತಸಂಚಯವನ್ನು ರಚಿಸುವುದು”. ಈ ಡೇಟಾಬೇಸ್ “ಜನಸಂಖ್ಯಾ ಮತ್ತು ಬಯೋಮೆಟ್ರಿಕ್ ವಿವರಗಳನ್ನು ಹೊಂದಿರುತ್ತದೆ”.

NPR ನಮೂನೆ

ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಯಾವ ರೀತಿಯ ಮಾಹಿತಿಯನ್ನು ಸಂಗ್ರಹಿಸುತ್ತದೆ?

ಸ್ಕ್ರೋಲ್.ಇನ್ ಈ ಪ್ರಕ್ರಿಯೆಯ ಭಾಗವಾಗಿರುವ 14 ಪ್ರಶ್ನೆಗಳನ್ನು ಪರಿಶೀಲಿಸಿದೆ, ಇದಕ್ಕಾಗಿ ಆಗಸ್ಟ್‌ನಲ್ಲಿ ಪ್ರಾಯೋಗಿಕ ಯೋಜನೆ ಪ್ರಾರಂಭವಾಯಿತು. ಪ್ರಶ್ನೆಗಳಲ್ಲಿ ಹೆಸರು, ವಯಸ್ಸು, ಲಿಂಗ, ಮನೆಯ ಸಂಬಂಧ, ರಾಷ್ಟ್ರೀಯತೆ, ಶೈಕ್ಷಣಿಕ ಅರ್ಹತೆಗಳು, ಉದ್ಯೋಗ, ಹುಟ್ಟಿದ ದಿನಾಂಕ, ವೈವಾಹಿಕ ಸ್ಥಿತಿ, ವಸತಿ ವಿಳಾಸ, ಜನ್ಮಸ್ಥಳ ಮತ್ತು ಮಾತೃಭಾಷೆಯಂತಹ ಜನಸಂಖ್ಯಾ ವಿವರಗಳು ಸೇರಿವೆ. ಇಲ್ಲಿಯವರೆಗೆ, ಕೇಂದ್ರ ಸರ್ಕಾರವು ಜನಗಣತಿಯ ಮೂಲಕ ಸಂಗ್ರಹಿಸುವ ಸಾಮಾನ್ಯ ದತ್ತಾಂಶಕ್ಕಿಂತ ಇಲ್ಲಿ ಏನೂ ಭಿನ್ನವಾಗಿಲ್ಲ. ಆದರೆ ನಂತರ, ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ತನ್ನ ಅಥವಾ ಅವಳ ಪೋಷಕರು ಎಲ್ಲಿ ಜನಿಸಿದರು ಎಂದು ಪ್ರತಿವಾದಿಯನ್ನು ಕೇಳುತ್ತಾರೆ. ಇದಲ್ಲದೆ, ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ಆಧಾರ್ ವಿವರಗಳು, ಚಾಲಕರ ಪರವಾನಗಿ, ಮತದಾರರ ಗುರುತಿನ ಚೀಟಿ ಮತ್ತು “ಲಭ್ಯವಿದ್ದರೆ” ಮೊಬೈಲ್ ಸಂಖ್ಯೆಯನ್ನು ಸಹ ಕೇಳಲಾಗಿದೆ.

ಅಧಿಕಾರಿಯೊಬ್ಬರು ಈ ಬಗ್ಗೆ ಸ್ಕ್ರೋಲ್.ಇನ್‌ಗೆ ತಿಳಿಸಿದ್ದು, ಅವರ ಪ್ರಕಾರ ಈ ಮಾಹಿತಿಯನ್ನು ನೀಡುವುದು ಕಡ್ಡಾಯವಲ್ಲ.ಆದಾಗ್ಯೂ, ಅನೇಕ ಪ್ರತಿಸ್ಪಂದಕರು ತಮ್ಮ ಆಧಾರ್ ವಿವರಗಳನ್ನು ನೀಡುವ ಸಾಧ್ಯತೆಯೊಂದಿಗೆ, ಇದು ಕೇಂದ್ರ ಸರ್ಕಾರಕ್ಕೆ ಮೊದಲ ಬಾರಿಗೆ ತಮ್ಮ ಬಯೋಮೆಟ್ರಿಕ್ ವಿವರಗಳನ್ನು ಅವರ ಪೋಷಕರ ಜನ್ಮಸ್ಥಳದಂತಹ ಮಾಹಿತಿಯೊಂದಿಗೆ ಸಂಪೂರ್ಣ ವಿವರ ನೀಡುವಂತೆ NPR ಅನುವು ಮಾಡಿಕೊಡುತ್ತದೆ.

ಎನ್‌ಪಿಆರ್‌ ಅನ್ನು ಎನ್‌ಆರ್‌ಸಿಗೆ ಹೇಗೆ ಜೋಡಿಸಲಾಗಿದೆ?

ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ ಕಾನೂನಿನ ಚೌಕಟ್ಟು ಪೌರತ್ವ ಕಾಯ್ದೆ, 1955 ರಲ್ಲಿ ಆಧರಿಸಿದೆ. 2003 ರಲ್ಲಿ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರವು “ಅಕ್ರಮ ವಲಸಿಗ” ವರ್ಗವನ್ನು ಪರಿಚಯಿಸಲು ಕಾಯ್ದೆಯನ್ನು ತಿದ್ದುಪಡಿ ಮಾಡಿತು. ಈ ತಿದ್ದುಪಡಿಯನ್ನು ಕಾರ್ಯಗತಗೊಳಿಸಲು, ನಿಯಮಗಳ ಗುಂಪನ್ನು ಹೊರಡಿಸಲಾಯಿತು. (ನಿಯಮಗಳು ಆಧಾರದ ಮೇಲೆ ಕಾನೂನನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬುದರ ಕುರಿತು ಪ್ರಾಯೋಗಿಕ ಸೂಚನೆಗಳಿವೆ.)

ಆ ಸಮಯದಲ್ಲಿ, ಈ ನಿಯಮಗಳು ಕೇವಲ ಏರಿಳಿತವನ್ನು ಸೃಷ್ಟಿಸಿದವು. ಆದರೆ ಅವರು ನಾಗರಿಕರ ರಾಷ್ಟ್ರೀಯ ನೋಂದಣಿಯನ್ನು ರಚಿಸುವ ಪ್ರಕ್ರಿಯೆಯನ್ನು ರೂಪಿಸಿದ್ದರಿಂದ ನಾಗರಿಕ ವಲಯದಲ್ಲಿ ಮತ್ತು ರಾಜಕೀಯವನ್ನು ತಲೆಕೆಳಗಾಗಿ ಮಾಡುವ ಯಾಂತ್ರಿಕ ವ್ಯವಸ್ಥೆಯನ್ನು ಅವರು ಸ್ಥಾಪಿಸಿದರು. ಈ ರಿಜಿಸ್ಟರ್ ನಿಯಮದಲ್ಲಿ “ಭಾರತದಲ್ಲಿ ಮತ್ತು ಭಾರತದ ಹೊರಗೆ ವಾಸಿಸುವ ಭಾರತೀಯ ನಾಗರಿಕರ ವಿವರಗಳನ್ನು ಹೊಂದಿರುವ ಕೋಷ್ಟಕವಿದೆ”

ಈ ತಿದ್ದುಪಡಿ ನಿಯಮದ ಪ್ರಕಾರ “ಭಾರತೀಯ ಸರ್ಕಾರವು ರಾಷ್ಟ್ರೀಯ ನಾಗರಿಕರ ನೋಂದಣಿಯ ಉದ್ದೇಶಕ್ಕಾಗಿ, ಸ್ಥಳೀಯ ಕುಟುಂಬದಲ್ಲಿ ವಾಸಿಸುವ, ಪ್ರತಿ ಕುಟುಂಬ ಮತ್ತು ವ್ಯಕ್ತಿಗೆ ಸಂಬಂಧಿಸಿದ ನಿರ್ದಿಷ್ಟ ವಿವರಗಳನ್ನು, ಪೌರತ್ವ ಸ್ಥಿತಿ ಸಂಗ್ರಹಿಸಲು ದೇಶಾದ್ಯಂತ ಮನೆ-ಮನೆಗೆ ಎಣಿಕೆ ಮಾಡಲು ಅವಕಾಶ ಕಲ್ಪಿಸುತ್ತದೆ.

ಅದರೊಂದಿಗೆ ಆಡಳಿತಾತ್ಮಕ ಉದ್ದೇಶಗಳಿಗಾಗಿ ಈ ವಿವರಗಳನ್ನು ವಿಭಜಿಸಿ,“ಭಾರತೀಯ ನಾಗರಿಕರ ರಾಷ್ಟ್ರೀಯ ನೋಂದಣಿ, ಭಾರತೀಯ ನಾಗರಿಕರ ರಾಜ್ಯ ನೋಂದಣಿ, ಭಾರತೀಯ ನಾಗರಿಕರ ಜಿಲ್ಲಾ ನೋಂದಣಿ, ಭಾರತೀಯ ನಾಗರಿಕರ ಉಪ-ಜಿಲ್ಲಾ ನೋಂದಣಿ, ಭಾರತೀಯ ನಾಗರಿಕರ ಸ್ಥಳೀಯ ನೋಂದಣಿ ”ಮತ್ತು ಉಪ-ಭಾಗಗಳಾಗಿ ವಿಂಗಡಿಸಲ್ಪಡುತ್ತದೆ.

ನಾಗರಿಕರ ನೊಂದಣಿಗಳನ್ನು ಹೇಗೆ ರಚಿಸಲಾಗುತ್ತದೆ?

ನಿಯಮಗಳು ಈ ಬಗ್ಗೆ ಸ್ಪಷ್ಟೀಕರಿಸುತ್ತಿದ್ದು “ಭಾರತೀಯ ನಾಗರಿಕರ ಸ್ಥಳೀಯ ರಿಜಿಸ್ಟರ್ ಜನಸಂಖ್ಯಾ ನೋಂದಣಿಯು ಜನಸಂಖ್ಯಾ ನೊಂದಣಿ ಅಧಿಕಾರಿ ಪರಿಶೀಲಿಸಿ ನೊಂದಾಯಿಸಿಕೊಳ್ಳುವುದು.

ಯಾವಾಗ ಸ್ಥಳೀಯ ರಿಜಿಸ್ಟರ್ ಪರಿಶೀಲನಾ ಪ್ರಕ್ರಿಯೆಯ ನಂತರ ಒಂದು ‘ಅನುಮಾಸ್ಪದ ಪೌರತ್ವ’ ವರ್ಗವನ್ನು ಪಟ್ಟಿ ಮಾಡುತ್ತದೆ. ನಂತರ ಈ ಪಟ್ಟಿಯ ಜನರು ತಮ್ಮ ಪೌರತ್ವ ಸಾಬೀತು ಮಾಡುವ ಪ್ರಕ್ರಿಯೆಯಾದ ಎನ್.ಆರ್.ಸಿಯಲ್ಲಿ ತಮ್ಮ ಪೌರತ್ವ ‘ಸಾಬೀತು ಅಥವಾ ಆಕ್ಷೇಪಣೆ’ ಸಲ್ಲಿಸುವ ಅವಕಾಶ ಕಲ್ಪಿಸುತ್ತದೆ. ಇದರ ಆಧಾರದಲ್ಲಿ ಎನ್.ಆರ್.ಸಿ‌ ಪಟ್ಟಿ ರಚನೆಗೆ ಸಹಾಯವಾಗುತ್ತದೆ.

ನಿಯಮಗಳಲ್ಲಿ ಉಲ್ಲೇಖಿಸಿದಂತೆ ಈ ಜನಸಂಖ್ಯಾ ನೋಂದಣಿ ರಾಷ್ಟ್ರೀಯ(NPR)ಯು ಜನಸಂಖ್ಯಾ ನೋಂದಣಿಯ ಹೊರತುಪಡಿಸಿ ಬೇರೇನೂ ಅಲ್ಲ. ಜುಲೈ 31, 2019 ರಂದು ಹೊರಡಿಸಲಾದ ಗೆಜೆಟ್ ಅಧಿಸೂಚನೆಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಅಸ್ಸಾಮ್ ಹೊರತು ಪಡಿಸಿ ಬೇರೆಲ್ಲ ಕಡೆ ರಾಜ್ಯಗಳು ಎನ್.ಪಿ.ಆರ್ ನವೀಕರಿಸಬೇಕೆಂದು ಸೂಚಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ದೇಶದ ಎಲ್ಲಾ ನಿವಾಸಿಗಳ ಪಟ್ಟಿಯನ್ನು ರಚಿಸುತ್ತದೆ. ತದನಂತರ ನಾಗರಿಕರ ರಾಷ್ಟ್ರೀಯ ನೋಂದಣಿ ಆ ಪಟ್ಟಿಯನ್ನು ತೆಗೆದುಕೊಳ್ಳುತ್ತದೆ ನೋಂದಣಿ(ಎನ್.ಆರ್.ಸಿ)”ಅನುಮಾನಾಸ್ಪದ ಪೌರತ್ವ” ದ ಜನರನ್ನು ಗುರುತಿಸುತ್ತದೆ.

NPR ಮತ್ತು NCR ವಿರುದ್ಧದ ಜಂಟಿ ವೇದಿಕೆಯ ಅರ್ಥಶಾಸ್ತ್ರಜ್ಞ ಮತ್ತು ಸಂಚಾಲಕ ಪ್ರಸೇನ್‌ಜಿತ್ ಬೋಸ್‌ ಅವರ ಪ್ರಕಾರ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯು (NPR) “ನಾಗರಿಕರ ರಾಷ್ಟ್ರೀಯ ನೋಂದಣಿಯ (NCR) ಪ್ರಕ್ರಿಯೆಯ ಮೊದಲ ಹೆಜ್ಜೆ” ಎಂದು ವಿವರಿಸಿದ್ದಾರೆ.

ಅಸೋಸಿಯೇಷನ್ ​​ಫಾರ್ ದಿ ಪ್ರೊಟೆಕ್ಷನ್ ಆಫ್ ಡೆಮಾಕ್ರಟಿಕ್ ರೈಟ್ಸ್ ರಂಜಿತ್ ಸುರ್ ಅವರ ಅಭಿಪ್ರಾಯದ ಪ್ರಕಾರ, “ರಾಷ್ಟ್ರೀಯ ಜನಸಂಖ್ಯೆಯ ನೋಂದಣಿಯ(NPR) ಏಕೈಕ ಕೆಲಸವೆಂದರೆ ನಾಗರಿಕರ ರಾಷ್ಟ್ರೀಯ ನೋಂದಣಿಯನ್ನು(NCR) ರಚಿಸುವುದು” ಮಾತ್ರವೇ ಆಗಿದೆಯೆಂದು ಉಲ್ಲೇಖಿಸಿದ್ದಾರೆ.

ರಾಷ್ಟ್ರವ್ಯಾಪಿ ಎನ್‌ಆರ್‌ಸಿ ಅಸ್ಸಾಂ ಎನ್‌ಆರ್‌ಸಿಯಿಂದ ಹೇಗೆ ಭಿನ್ನವಾಗಿದೆ?

ಗಮನಾರ್ಹವಾಗಿ ಮೇಲೆ ವಿವರಿಸಿದ ನಾಗರಿಕರ ರಾಷ್ಟ್ರೀಯ ನೋಂದಣಿ ಪ್ರಕ್ರಿಯೆಯು ಅಸ್ಸಾಂನಲ್ಲಿ ಈಗಾಗಲೇ ನಡೆದ ನಾಗರಿಕರ ರಾಷ್ಟ್ರೀಯ ನೋಂದಣಿಗಿಂತ ಭಿನ್ನವಾಗಿದೆ. ಏಕೆಂದರೆ 2003 ರ ನಿಯಮಗಳು ರಾಜ್ಯಕ್ಕೆ ವಿಶೇಷ ವಿನಾಯಿತಿಯನ್ನು ನೀಡುತ್ತವೆ. ಅಸ್ಸಾಂನಲ್ಲಿ, ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ಆಧರಿಸಿ ಪೌರತ್ವ ಸ್ಥಿತಿ ಸೇರಿದಂತೆ ರಾಜ್ಯದ ಸ್ಥಳೀಯ ಪ್ರದೇಶದಲ್ಲಿ ವಾಸಿಸುವ, ಪ್ರತಿ ಕುಟುಂಬ ಮತ್ತು ವ್ಯಕ್ತಿಗೆ ಸಂಬಂಧಿಸಿದ ನಿರ್ದಿಷ್ಟ ವಿವರಗಳ ಸಂಗ್ರಹಕ್ಕಾಗಿ ಎಲ್ಲಾ ನಿವಾಸಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಮೂಲಕ ನಾಗರಿಕರ ರಾಷ್ಟ್ರೀಯ ನೋಂದಣಿಯನ್ನು ರಚಿಸಲಾಗುತ್ತದೆ. 2003 ರ ನಿಯಮದಂತೆ 1951 ಎನ್.ಆರ್.ಸಿ ಸ್ಥಿತಿ ಮತ್ತು 24 ಮಾರ್ಚ್, 1971ರ ಮಧ್ಯರಾತ್ರಿಯ ಚುನಾವಣೆಯ ಪಾತ್ರಧಾರಿತವಾಗಿದೆ.

ಆದರೆ ಭಾರತಕ್ಕೆ ಎನ್.ಆರ್.ಸಿ ಪಟ್ಟಿಯು ರಾಷ್ಟ್ರೀಯ ಜನಸಂಖ್ಯೆಯ ನೋಂದಣಿಯ ಆಧಾರದ ಮೇಲೆ ಸಿದ್ದ ಪಡಿಸಲಾಗುತ್ತದೆ. ಇದರ ಪರಿಣಾಮವಾಗಿ, ಅಸ್ಸಾಂ ಮತ್ತು ಭಾರತದ ಉಳಿದ ಭಾಗಗಳ ನಾಗರಿಕರ ರಾಷ್ಟ್ರೀಯ ನೋಂದಣಿ ಹೇಗೆ ನಡೆಯುತ್ತದೆ ಎಂಬುದರಲ್ಲಿ ವ್ಯತ್ಯಾಸವಿದೆ.

“ಅಸ್ಸಾಂ ರಾಷ್ಟ್ರೀಯ ನಾಗರಿಕರ ನೋಂದಣಿ ಅರ್ಜಿ ವಿಧಾನ ಜನಸಂಖ್ಯೆ ಆಧಾರದಲ್ಲಿ ಮಾಡಲಾಗಿತ್ತು. ಅವರೇ ಬಂದು ತಮ್ಮ ದಾಖಲೆ ಪ್ರಸ್ತುತ ಪಡಿಸಬೇಕಾಗಿತ್ತು. ಆದರೆ ಅಖಿಲ ಭಾರತ ನಾಗರಿಕರ ನೋಂದಣಿ (NPR)ರನ್ನು ಎಣಿಕೆ ಆಧಾರದ ಮೇಲೆ ಮಾಡಲಾಗುತ್ತದೆ.ಮನೆ ಮನೆಗೆ ಹೋಗಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ರೂಪದಲ್ಲಿ ದತ್ತಾಂಶವನ್ನು
ಸಂಗ್ರಹಿಸುವ ಮೂಲಕ ಮಾಡಲಾಗುತ್ತೆಂದು ರಂಜಿತ್ ಸುರ್ ವಿವರಿಸಿದರು.

ಅಸ್ಸಾಂ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ಪ್ರಕ್ರಿಯೆಯನ್ನಿ ವ್ಯಾಪಕವಾಗಿ ಟೀಕಿಸಿರುವ ಸಿವಿಲ್ ರೈಟ್ಸ್ ಕಾರ್ಯಕರ್ತರು ಈಗ ಅಖಿಲ ಭಾರತೀಯ ನಾಗರಿಕರ ನೋಂದಣಿಯನ್ನು ನಡೆಸಲು ಬಳಸಲಾಗುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿಧಾನವು ಇನ್ನಷ್ಟು ಅಪಾರದರ್ಶಕವಾಗಿದೆ‌ ಎಂದು ಹೇಳಿದ್ದಾರೆ.

ಅಸ್ಸಾಂನಲ್ಲಿ, ಕಟ್-ಆಫ್ ದಿನಾಂಕ ಮತ್ತು ಅಗತ್ಯವಿರುವ ದಾಖಲೆಗಳನ್ನು ಎಲ್ಲರಿಗೂ ತಿಳಿದಿತ್ತು. ಶ್ರೀಮಂತ ಅಥವಾ ಬಡ, ಹಿಂದೂ ಅಥವಾ ಮುಸ್ಲಿಂ, ಎಲ್ಲರೂ ಒಂದೇ ಸರದಿಯಲ್ಲಿ ನಿಲ್ಲಬೇಕಾಯಿತು ”ಎಂದು ಪ್ರಸೇನ್‌ಜಿತ್ ಬೋಸ್ ವಿವರಿಸಿದರು. “ಆದರೆ ಇಲ್ಲಿ ಎಲ್ಲವನ್ನೂ ಅಧಿಕಾರಶಾಹಿಗೆ ಬಿಡಲಾಗಿದೆ. ಯಾರು ಅನುಮಾನಾಸ್ಪದ ನಾಗರಿಕ ಮತ್ತು ಯಾರು ಅಲ್ಲ ಎಂಬುದನ್ನು ರಾಜ್ಯ ನಿರ್ಧರಿಸುತ್ತದೆ. ಇದು ಸಂಪೂರ್ಣವಾಗಿ ಅನಿಯಂತ್ರಿತವಾಗಿದೆ ಎಂಬ ವಿಚಾರ ತಿಳಿಸಿದ್ದಾರೆ.

ಜನಗಣತಿಗಿಂತ ಎನ್‌ಪಿಆರ್ ಹೇಗೆ ಭಿನ್ನವಾಗಿದೆ?

ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಜನಗಣತಿಯ ಭಾಗವಾಗಿದೆ ಎಂಬುದು ಎಲ್ಲರ ಕಲ್ಪನೆಯಾಗಿದೆ. ಈ ಪ್ರಕ್ರಿಯೆಯನ್ನು ಪೌರತ್ವ ಕಾಯ್ದೆ, 1955 ಮತ್ತು 2003 ರ ನಿಯಮಗಳ ಅಡಿಯಲ್ಲಿ ನಡೆಸಲಾಗುತ್ತಿದೆ, ಆದರೆ ಜನಗಣತಿಯನ್ನು 1948 ರ ಜನಗಣತಿ ಕಾಯ್ದೆಯಡಿ ಮಾಡಲಾಗುತ್ತದೆ” ಎಂದು ರಂಜಿತ್ ಸುರ್ ವಿವರಿಸಿದ್ದಾರೆ. ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಈ ಪ್ರಕ್ರಿಯೆ ನಿಲ್ಲಿಸಲಾಗಿದೆ. ಆದರೆ ಈ ಬಗ್ಗೆ ಪ್ರಕ್ರಿಯಿಸಿರುವ ಬಿಜೆಪಿ 2021 ರ ಒಳಗೆ ಪೂರ್ಣಗೊಳಿಸಲಿದೆ ಎಂದೂ ಹೇಳಿದೆ.

“ಜನಗಣತಿಯ ದತ್ತಾಂಶವನ್ನು ರಹಸ್ಯವಾಗಿಡಲಾಗುತ್ತದೆ. ಮತ್ತು ಅದನ್ನು ಬೇರೆ ಯಾವುದಕ್ಕೂ ಬಳಸಲಾಗುವುದಿಲ್ಲ. ಆದರೆ ಎನ್.ಪಿ.ಆರ್ ನಿಂದ ಬಂದ ದತ್ತಾಂಶವನ್ನು ” ಹಕ್ಕು ಸಾಧನೆ ಮತ್ತು ಆಕ್ಷೇಪಣೆ” ಗೆ ಸಾರ್ವಜನಿಕವಾಗಿ ಪ್ರಕಟಿಸಲಾಗುತ್ತದೆ.

ಅವರು ಜಾರಿಗೆ ತರುತ್ತಿರುವ ಕಾನೂನುಗಳು ವಿಭಿನ್ನವಾಗಿವೆ, ಅವರ ಗುರಿಗಳು ವಿಭಿನ್ನವಾಗಿವೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ ಜನಗಣತಿಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸುರ್ ಅಭಿಪ್ರಾಯ ಪಟ್ಟಿದ್ದಾರೆ.

ಜನರಲ್ಲಿ ಗೊಂದಲ ಸೃಷ್ಟಿಸಲು ಕೇಂದ್ರ ಸರಕಾರ ರಾಷ್ಟ್ರೀಯ ಜನಸಂಖ್ಯಾ ನೊಂದಣಿ ಮತ್ತು ಜನಸಂಖ್ಯಾ ಗಣತಿ 2021 ನ್ನು ಜೊತೆಯಾಗಿ ನಡೆಸುವ ಸಾಧ್ಯತೆಯಿದೆ ಎಂದು ಸುರ್ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

 

ಮೂಲ: ಸ್ಕ್ರೋಲ್

LEAVE A REPLY

Please enter your comment!
Please enter your name here