ಮೈಸೂರು: ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಮೈಸೂರಿಗೆ ಆಗಮಿಸುತ್ತಿದ್ದು ಈ ಹಿನ್ನೆಲೆಯಲ್ಲಿ, ನಗರದಾದ್ಯಂತ ಭಾರೀ ಭದ್ರತೆ ಏರ್ಪಡಿಸಲಾಗಿದೆ. ಈಗಾಗಲೇ ಕಾರ್ಯಕ್ರಮ ನಡೆಯುವ ಸ್ಥಳವನ್ನು ಎಸ್​ಪಿಜಿ ತಂಡ  ಸುಪರ್ದಿಗೆ ಪಡೆದಿದ್ದು, ಭದ್ರತೆಗೆ  7 ಐಪಿಎಸ್ ಅಧಿಕಾರಿಗಳು, 22 ಎಸಿಪಿ, 50ಕ್ಕೂ ಹೆಚ್ಚು ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಒಟ್ಟು 1500 ಪೊಲೀಸರನ್ನ  ನಿಯೋಜನೆ  ಮಾಡಲಾಗಿದೆ. ಪ್ರತಿ ಹಂತದಲ್ಲೂ ಪ್ರಧಾನಿಯ ವಿಶೇಷ ಭದ್ರತಾ ಪಡೆಯಿಂದ ಪರಿಶೀಲನೆ ನಡೆಸಲಾಗುತ್ತಿದೆ. ಇನ್ನು ನಗರದಲ್ಲಿ  ಮೋದಿ ಕಾರು ಸಂಚರಿಸುವ ಹಿನ್ನೆಲೆಯಲ್ಲಿ ನಗರದ ಹಲವು ಕಡೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಮಧ್ಯಾಹ್ನ 12ರಿಂದ ಸಂಜೆ 7ರವರೆಗೆ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ನಿಲುಗಡೆಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ನಂಜನಗೂಡು ರಸ್ತೆಯಲ್ಲಿ ಮಂಡಕ್ಕಳ್ಳಿ ವಿಮಾನ ನಿಲ್ದಾಣದಿಂದ ಜೆಎಸ್‌ಎಸ್ ವೃತ್ತದವರೆಗೆ, ಚಾಮರಾಜ ಜೋಡಿ ರಸ್ತೆಯಲ್ಲಿ ಜೆಎಸ್‌ಎಸ್ ವೃತ್ತದಿಂದ ರಾಮಸ್ವಾಮಿ ವೃತ್ತದವರೆಗೆ, ಜೆಎಲ್​​​ಬಿ ರಸ್ತೆಯಲ್ಲಿ ಆರ್‌ಟಿಓ ವೃತ್ತದಿಂದ– ರಾಮಸ್ವಾಮಿ ವೃತ್ತ- ಮುಡಾ ವೃತ್ತ- ರೋಟರಿ ಜಂಕ್ಷನ್‌ವರೆಗೆ, ಬೋಗಾದಿ ರಸ್ತೆಯಲ್ಲಿ ರೈಲ್ವೆ ಲೆವಲ್ ಕ್ರಾಸಿಂಗ್ ನಿಂದ ಡಿ.ಸುಬ್ಬಯ್ಯ ರಸ್ತೆ ಜಂಕ್ಷನ್‌ವರೆಗೆ, ಕೆ.ಆರ್.ಬಿ. ರಸ್ತೆಯಲ್ಲಿ ಏಕಲವ್ಯ ವೃತ್ತದಿಂದ ಕೌಟಿಲ್ಯ ವೃತ್ತದವರೆಗೆ ಸಂಚಾರ ಹಾಗೂ ಪಾರ್ಕಿಂಗ್ ಬಂದ್ ಮಾಡಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.