ಚಂಡಿಗಢ್: ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರ ಪಕೋಡ ಹೇಳಿಕೆ ಅವರ ಬೆನ್ನು ಬಿಟ್ಟ ಹಾಗಿಲ್ಲ. ವಿದ್ಯಾವಂತ ನಿರುದ್ಯೋಗಿ ಯುವಕರು ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸುತ್ತ ನರೇಂದ್ರ ಮೋದಿ ಪಕೋಡ ಮಾರುತ್ತ ಪ್ರತಿಭಟನೆ ಹಮ್ಮಿಕೊಳ್ಳುವುದು ಕಾಮನ್!

ಇದೀಗ ಚಂಡಿಗಢ್ ನಲ್ಲಿ ಅಭ್ಯರ್ಥಿ ಕಿರಣ್ ಕೇರ್ ಪರವಾಗಿ ಪ್ರಚಾರ ಸಭೆ ಹಮ್ಮಿಕೊಳ್ಳಲು ಬಂದಿದ್ದ ಮೋದಿಗೆ ‘ನರೇಂದ್ರ ಮೋದಿ ಪಕೋಡಾ ಸ್ಟಾಲ್’ ಮತ್ತೆ ಮುಜುಗರ ತಂದಿದೆ.

ನರೇಂದ್ರ ಮೋದಿ ಹೆಸರಿನಲ್ಲಿ ಇಂಜಿನಿಯರಿಂಗ್,ಬಿ.ಎ ಎಲ್ಎಲ್.ಬಿ ವಿದ್ಯಾರ್ಥಿಗಳು ಪಕೋಡ ಮಾರುತ್ತಿದ್ದರು. ಆದರೆ ಪೊಲೀಸರು‌ ಪ್ರತಿಭಟನಾಕಾರರನ್ನು ಬಂಧಿಸಿ ಕೆಲಕಾಲ ಠಾಣೆಯಲ್ಲಿಟ್ಟು ಬಿಡುಗಡೆಗೊಳಿಸಿದ್ದಾರೆ.

ನಾವು ಪಕೋಡಾ ಯೋಜನೆಯಡಿಯಲ್ಲಿ ಉದ್ಯೋಗ ಗಿಟ್ಟಿಸಿರುವುದನ್ನು ಮೋದಿಗೆ ತಿಳಿಸಿ, ಸ್ವಾಗತಿಸಲು ರ಼್ಯಾಲಿಗೆ ಆಗಮಿಸಿದ್ದೇವೆಂದು ವಿದ್ಯಾರ್ಥಿಗಳು ನರೇಂದ್ರ ಮೋದಿಯ ಆಫ್ ಲೈನ್ ಟ್ರೋಲ್ ಮಾಡಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.