ಬೆಂಗಳೂರು: ನಮ್ಮ ಕಲಿಕೆ ನಾಳೆ ನಮ್ಮನ್ನು ಗಟ್ಟಿಗೊಳಿಸುತ್ತದೆ,ನಿರಾಶರಾಗಬೇಡಿ. ನಿಮ್ಮೊಂದಿಗೆ ನಾವಿದ್ದೇವೆ, ಇಡೀ ಭಾರತವಿದೆ ಎಂದು ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಆತ್ಮಸ್ಥೈರ್ಯ ತುಂಬಿದ್ದಾರೆ.

ನಗರದಲ್ಲಿರುವ ಇಸ್ರೋ ಕಂಟ್ರೋಲ್ ಸೆಂಟರ್ ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಿ ಮೋದಿಯವರು ಇಸ್ರೋ ವಿಜ್ಞಾನಿಗಳ ಕಾರ್ಯಕ್ಷಮತೆಯನ್ನು ಹಾಗೂ ಪರಿಶ್ರಮವನ್ನು ಕೊಂಡಾದಿದ್ದಾರೆ.
“ನಿಮ್ಮ ಪ್ರಯತ್ನವನ್ನು ಇಡೀ ಭಾರತವೇ ಕೊಂಡಾಡುತ್ತಿದೆ. ಅಡೆತಡೆಗಳಿಂದ ನಮ್ಮ ಉತ್ಸಾಹವೇನೂ ಕಡಿಮೆಯಾಗಲಿಲ್ಲ. ಬದಲಾಗಿ ಹೆಚ್ಚಾಗಿದೆ. ದೇಶದ ಪ್ರಗತಿಗೆ ಅತ್ಯಂತ ದೊಡ್ಡ ಕೊಡುಗೆಯನ್ನು ನೀಡಿದ್ದೀರ, ಕಳೆದ ರಾತ್ರಿ ನಿಮ್ಮ ಮನಸ್ಥಿತಿ ನನಗೆ ಅರ್ಥವಾಗಿದೆ. ನಿಮ್ಮ ಕಣ್ಣುಗಳು ಹಾಗೂ ಮುಖದ ಭಾವನೆಗಳೇ ಎಲ್ಲವನ್ನೂ ಹೇಳುತ್ತಿತ್ತು. ಹೀಗಾಗಿಯೇ ಆ ಸಮಯದಲ್ಲಿ ನಿಮ್ಮೊಂದಿಗೆ ಹೆಚ್ಚು ಕಾಲ ಇರಲಿಲ್ಲ. ವಿಜ್ಞಾನಿಗಳ ಕಾರ್ಯಕ್ಷಮತೆಗೆ ಹೆಮ್ಮೆ ಪಡುತ್ತೇವೆ. ನಿಮ್ಮ ಈ ಕಾರ್ಯಕ್ಷಮತೆ ಚಂದ್ರನನ್ನು ಮುಟ್ಟುವ ಆಸೆ ಮತ್ತಷ್ಟು ಗಟ್ಟಿ ಮಾಡಿದೆ.ಎಂದು ಧೈರ್ಯ ತುಂಬಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.