ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚಾರಣೆ ಅಂಗವಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ಪೊರಕೆ ಹಿಡಿದು ಇಂದು ಕಸ ಗುಡಿಸಿದ್ದಾರೆ.

ಇಂದು ಜಿಲ್ಲಾಸ್ಪತ್ರೆಗೆ 8 ಗಂಟೆಗೆ ಭೇಟಿ ನೀಡಿದ ಅವರು ವಾರ್ಡ್ ಸ್ವಚ್ಛತೆ ಕಾಪಾಡುವಲ್ಲಿ ವಿಫಲರಾದ ಆಸ್ಪತ್ರೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಟೀಲು ಅವರು ಕೈಗವಸು ಹಾಕಿಕೊಂಡು ಪೊರಕೆ ಹಿಡಿಯುತ್ತಿದ್ದಂತೆ ಬಿಜೆಪಿ ಮುಖಂಡರು ಸ್ವಚ್ಛತೆಗೆ ಮುಂದಾದರು. ಸಂಸದ ಎ. ನಾರಾಯಣಸ್ವಾಮಿ ಹಾಗೂ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ಕಸಗುಡಿಸಿದರು. ಚರಂಡಿ ಪಕ್ಕದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆಗೆದು ಬುಟ್ಟಿಗೆ ತುಂಬಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.