ಮೈಸೂರು : ಶ್ರೀಲಂಕಾ ಸಂಭವಿಸಿದ ಸ್ಫೋಟಗಳ ಹಿನ್ನೆಲೆಯಲ್ಲಿ ಕ್ರೈಸ್ತ ಸಮುದಾಯದ ಜೊತೆ ನಾವಿದ್ದೇವೆ ಎಂದು ಸಾರಲು ರವಿವಾರ ಮೈಸೂರಿನ ಸೈಂಟ್ ಫಿಲೋಮಿನಾ ಚರ್ಚಿನಲ್ಲಿ ಬೆಳಿಗ್ಗೆ 9:30ಕ್ಕೆ ನಡೆಯಲಿರುವ ಪ್ರಾರ್ಥನೆ ವೇಳೆ ಚರ್ಚ್ ಹೊರಗೆ ನಿಂತು ಕ್ರೈಸ್ತರಿಗೆ ಜೊತೆಯಾಗಲು  ಮುಸ್ಲಿಮರಿಗೆ ಮೈಸೂರು ವಿಭಾಗದ ಜಮಾತೆ ಇಸ್ಲಾಮಿ ಹಿಂದ್ ನಾಯಕ ಮುನವ್ವರ್ ಪಾಶ ಕರೆ ನೀಡಿದ್ದಾರೆ.

ಕಳೆದ ಭಾನುವಾರ ಶ್ರೀಲಂಕಾದಲ್ಲಿ ಈಸ್ಟರ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆಯ ಸಂದರ್ಭದಲ್ಲಿ ಉಗ್ರಗಾಮಿಗಳು ಬಾಂಬ್ ಸ್ಪೋಟಿಸಿ ನೂರಾರು ಜನರ ಸಾವಿಗೆ ಕಾರಣಕರ್ತರಾದರು. ಈ ಒಂದು ಸ್ಪೋಟದ ವಿರುದ್ಧ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಮಡಿದ ಜನರಿಗಾಗಿ ಜಾತಿ ಧರ್ಮ ಮರೆತು ಕಂಬನಿ ಮಿಡಿದ್ದಿದ್ದಾರೆ. ಮಾನವೀಯ ವಿರುದ್ಧ ನಡೆದ ಈ ಘಟನೆಯ ಮರುಕಳಿಸದಿರಲೆಂದು ಕ್ರೈಸ್ತ ಸಹೋದರ ಪ್ರಾರ್ಥನೆಯ ವೇಳೆ ಮುಸ್ಲಿಮರು ನಿಮ್ಮ ಜೊತೆಗಿದ್ದೇವೆ ಎಂದು ಸಾರಲು ಸಂದೇಶವನ್ನು ಸಾರಲು ಮೈಸೂರು ಜಮಾಅತೆ ಇಸ್ಲಾಮೀ ಹಿಂದ್ ಮುಂದಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.