ಬೆಳಗಾವಿ: ಪೆಟ್ರೋಲ್​ ಬಂಕ್​ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಿತ್ತೂರು ಹೊರವಲಯದಲ್ಲಿ ನಡೆದಿದೆ.

ಇಲ್ಲಿನ ಶಿವಾ ಪೆಟ್ರೋಲ್​ ಬಂಕ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಲಿಂಗದಳ್ಳಿ ಗ್ರಾಮದ ಮಂಜುನಾಥ ಪಟ್ಟಣಶೇಟ್ಟಿ (30) ತಿಗಡೊಳ್ಳಿ ಗ್ರಾಮದ ಮುಸ್ತಾಕ ಬೀಡಿ (32) ಹತ್ಯೆಗೀಡಾದವರು.

ಇವರಿಬ್ಬರೂ ರಾತ್ರಿ ಅದೇ ಪೆಟ್ರೋಲ್​ ಬಂಕ್​ನಲ್ಲಿ ಮಲಗಿ ನಿದ್ರಿಸುತ್ತಿದ್ದರು. ಓರ್ವ ಹೊರಗೆ ಮಲಗಿದ್ದ. ಮತ್ತೋರ್ವ ಒಳಗಿದ್ದ. ತಡರಾತ್ರಿ ಪೆಟ್ರೋಲ್​ಬಂಕ್​ಗೆ ಆಗಮಿಸಿದ ದುಷ್ಕರ್ಮಿಗಳು ಇಬ್ಬರನ್ನೂ ಕತ್ತು ಕೊಯ್ದು ಹತ್ಯೆಗೈದಿದ್ದಾರೆ.

ಕೊಲೆಗೆ ಕಾರಣ ಹಾಗೂ ಆರೋಪಿಗಳು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ಪರಿಶೀಲಿಸಿದ್ದು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.