ನವದೆಹಲಿ: ಚಲಿಸುತ್ತಿದ್ದ ವಿಮಾನದಲ್ಲಿ ಇಂಧನ ಖಾಲಿಯಾದ ಪರಿಣಾಮ ವಿಮಾನವನ್ನು ಪೈಲಟ್ ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ. ಮುಂಬೈನಿಂದ ದೆಹಲಿಯತ್ತ ತೆರಳುತ್ತಿದ್ದ 153 ಜನರನ್ನು ಹೊತ್ತಿದ್ದ ವಿಸ್ತಾರ ವಿಮಾನದಲ್ಲಿ ಇಂಧನ ಖಾಲಿಯಾಗಿತ್ತು. ಇದರಿಂದ ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ವಿಮಾನ ಸಿಬ್ಬಂದಿ ಬಂದು ಇಂಧನ ಖಾಲಿಯಾಗಿದೆ. ಹಾಗಾಗಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.

ಯಾರೂ ಗಾಬರಿಗೊಳ್ಳುವುದು ಬೇಡ ಎಂದು ಹೇಳಿದಾಗ ಸ್ವಲ್ಪ ನಿರಾಳವಾಗಿತ್ತು. 10 ನಿಮಿಷಗಳ ಲ್ಯಾಂಡಿಂಗ್ ಬಳಿಕ ಇಂಧನ ಭರ್ತಿ ಮಾಡಿಕೊಂಡು ಮತ್ತೆ ಹಾರಾಟ ನಡೆಸಿತ್ತು. 153 ಪ್ರಯಾಣಿಕರಿದ್ದ ವಿಮಾನವನ್ನು ಲಖ್ನೌನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿಸಲಾಯಿತು. ಇದ್ದ ಇಂಧನದಲ್ಲಿ ಇನ್ನೂ 10 ನಿಮಿಷಗಳ ಕಾಲ ಮಾತ್ರ ವಿಮಾನ ಹಾರಾಟ ನಡೆಸಬಹುದಿತ್ತು. 300 ಕೆಜಿ ತೂಕ ಇಂಧನ ಹೊಂದಿದೆ ಹಾಗಾಗಿ ಹಾರಾಟ ನಡೆಸಲು ಕಷ್ಟವಾಗುತ್ತಿತ್ತು. ಹಾಗಾಗಿ ತಕ್ಷಣವೇ ಪೈಲಟ್ ‘ಫ್ಯೂಲ್ ಮೇಡೇ’ ಘೋಷಿಸಿದರು. ಏರ್ ಟ್ರಾಫಿಕ್ ನಿಯಂತ್ರಿಸಲು ತಕ್ಷಣ ಸೂಚನೆ ನೀಡಲಾಯಿತು. ಆಸುಪಾಸು ಬೇರೆ ವಿಮಾನಗಳು ಬರದಂತೆ ತಡೆಯಲು ಏರ್ ಕಂಟ್ರೋಲ್ ರೂಮ್ಗೆ ತಕ್ಷಣವೇ ಮಾಹಿತಿ ನೀಡಲಾಯಿತು.

ಇಂಧನ ಕೊರತೆಯಾಗಿದ್ದರಿಂದ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಲಕ್ನೋನಲ್ಲಿ ಇಳಿಸಲಾಯಿತು. ಖಾನ್ಪುರ ಅಥವಾ ಪ್ರಯಾಗ್ರಾಜ್ನಲ್ಲಿ ಇಳಿಸುವ ಸಾಧ್ಯತೆಗಳೂ ಹೆಚ್ಚಿದ್ದವು. ಕೊನೆಗೂ ಭಾರತಕ್ಕೆ ತೆರೆದುಕೊಂಡ ಪಾಕಿಸ್ತಾನದ ಏರೋಸ್ಪೇಸ್ ಮಾರ್ಗ ಮಧ್ಯದಲ್ಲಿ ಲಖ್ನೌನಲ್ಲಿ ಹವಾಮಾನ ಸುಧಾರಿಸಿದೆ.ಅಲ್ಲಿಯೇ ಲ್ಯಾಂಡಿಂಗ್ ಮಾಡಿದರೆ ಉತ್ತಮ ಎನ್ನುವ ಸೂಚನೆಯೊಂದಿಗೆ ಪೈಲಟ್ ವಿಮಾನವನ್ನು ಲಖ್ನೌನಲ್ಲಿ ಲ್ಯಾಂಡಿಂಗ್ ಮಾಡಿಸಿದ್ದರು. ಕಾನೂನು ಪ್ರಕಾರ ವಿಮಾನ ಹಾರಾಟಕ್ಕೂ ಮುನ್ನ ಇಂಧನವನ್ನು ಪರೀಕ್ಷಿಸಿಕೊಳ್ಳಲೇ ಬೇಕು. ಆದರೂ ಅದು ಹೇಗೆ ಇಂಧನ ಕೊರತೆ ಕಾಣಿಸಿತು ಎನ್ನುವ ಕುರಿತು ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.