ಪೌರತ್ವ ತಿದ್ದುಪಡಿ ಕಾಯಿದೆಯನ್ನು ವಿರೋಧಿಸುವವರನ್ನು ದೇಶದ್ರೋಹಿ ಅಥವಾ ದೇಶ ವಿರೋಧಿ ಎನ್ನುವಂತಿಲ್ಲ ; ಸೆಕ್ಷನ್ 144 ಆದೇಶವನ್ನು ಕ್ವ್ಯಾಶ್ ಮಾಡಿದ ಮುಂಬೈ ಹೈಕೋರ್ಟ್!

0
83

ಮುಂಬೈ: ಮುಂಬೈ ಉಚ್ಚ ನ್ಯಾಯಾಲಯದ ಮಹತ್ವದ ತೀರ್ಪಿನಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯನ್ನು ವಿರೋಧಿಸುವವರನ್ನು ದೇಶದ್ರೋಹಿಗಳು ಅಥವಾ ದೇಶವಿರೋಧಿಗಳೆಂದು ಕರೆಯುವಂತಿಲ್ಲವೆಂದು ಹೇಳಿದೆ.

ಪ್ರತಿಭಟನೆಯನ್ನು ನಿರ್ಬಂಧಿಸುವ ಸಿ.ಆರ್.ಪಿ.ಸಿ 144 ಆದೇಶವನ್ನು ಕ್ವ್ಯಾಶ್ ಮಾಡಿ ಆದೇಶ ಹೊರಡಿಸಿದ ನ್ಯಾಯಾಲಯ, 144 ಸೆಕ್ಷನ್ ಆದೇಶ ಹೊರಡಿಸುವಲ್ಲಿ ಯಾವುದೇ ಪ್ರಮಾಣಿಕತೆ ಕಂಡು ಬರುತ್ತಿಲ್ಲ. ಪ್ರತಿಭಟನೆ ಹತ್ತಿಕ್ಕಲು ಆದೇಶ ಹೊರಡಿಸಲಾಗುತ್ತಿದೆ ಎಂದು ಅಭಿಪ್ರಾಯ ಪಟ್ಟಿದೆ.

ಪ್ರತಿಭಟನೆ ನಡೆಸಲು ಉದ್ದೇಶಿಸಿದಾಗ ಬೀಡ್ ಜಿಲ್ಲೆಯಲ್ಲಿ ಹಾಕಿದ 144 ಸೆಕ್ಷನ್ ಪ್ರಶ್ನಿಸಿ ಇಫ್ತಿಕಾರ್ ಝಕಿ ಶೇಖ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ಈ ಮಹತ್ವದ ಆದೇಶ ಸರಕಾರಕ್ಕೆ ಭಾರೀ ಮುಖಭಂಗ ತಂದಿದೆ. ಅದರೊಂದಿಗೆ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸುವವರಿಗೆ ದೇಶದ್ರೋಹಿಗಳು ಎನ್ನುತ್ತಿದ್ದವರ ಬಾಯಿಯನ್ನು ನ್ಯಾಯಾಲಯ ಮುಚ್ಚಿಸಿದೆ.

ದೇಶದ ಸ್ವಾತಂತ್ರ್ಯ ನಡೆದದ್ದು ಬ್ರಿಟಿಷರ ವಿರುದ್ದ, ಸರಕಾರದ ವಿರುದ್ಧ ನಡೆಯುವ ಪ್ರತಿಭಟನೆಗಳಿಗೆ ದೇಶದ್ರೋಹ ಎನ್ನುವಂತಿಲ್ಲವೆಂದು ನ್ಯಾಯಾಲಯ ತಿಳಿಸಿದೆ.

ಕರ್ನಾಟಕ ಉಚ್ಚ ನ್ಯಾಯಾಲಯ ಕೂಡ ಸಪ್ರತಿಭಟನೆ ನಡೆಸದಂತೆ ಬೆಂಗಳೂರಿನಲ್ಲಿ ಹಾಕಿದ್ದ ಸೆಕ್ಷನ್ 144 ನ್ನು ಕಾನೂನು ಬಾಹಿರವೆಂದು ತೀರ್ಪು ನೀಡಿತ್ತು.

LEAVE A REPLY

Please enter your comment!
Please enter your name here