ಕೇರಳ: ಮನೆ ಕಟ್ಟಲು 2003 ರಲ್ಲಿ ತೆಗೆದುಕೊಂಡ ಸಾಲವನ್ನು ಮರು ಪಾವತಿಸಲಾಗದೆ ಬೆಂಕಿ ಹಚ್ಚಿ ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ತಿರುವಂತಪುರದಲ್ಲಿ ನಡೆದಿದೆ.

ಐದು ಲಕ್ಷ ರೂಪಾಯಿಗಳನ್ನು ಸಂದಿಸಿದ್ದ ಕುಟುಂಬ ಉಳಿದ 6.80 ಲಕ್ಷ ರೂಪಾಯಿ ಬಡ್ಡಿ ಸಮೇತ ಪಾವತಿಸುವಂತೆ ನಿಗದಿಪಡಿಸಿದ್ದ ಕೊನೆಯ ದಿನಾಂಕ ಹತ್ತಿರವಾಗುತ್ತಿದ್ದ ಕಾರಣ ತಾಯಿ ಲೇಖ (42) ಮಗಳು ವೈಷ್ಣವಿ(19) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಲೇಖನ ಪತಿ ಗಲ್ಫ್ ದೇಶದಿಂದ ಉದ್ಯೋಗ ಕಳೆದುಕೊಂಡು ಊರಿಗೆ ಬಂದ ಮೇಲೆ ಹಣ ಪಾವತಿಸಿದ್ದು ಕಷ್ಟವಾಗಿತ್ತು. ಬ್ಯಾಂಕ್ ನಲ್ಲಿ ಸಮಯಾವಕಾಶವನ್ನು ಕೇಳಿದ್ದರೆಂದು ಲೇಖನ ಪತಿ ಹೇಳಿದ್ದಾರೆ.

ಈತನ್ಮಧ್ಯೆ ಬ್ಯಾಂಕ್ ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸಲು ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದು, ನ್ಯಾಯಾಲಯದ ನಿರ್ದೇಶನದಂತೆ ನಾವು ಸಾಲ ವಸೂಲಿ ಪ್ರಕ್ರಿಯೆ ನಡೆಸಿರುವುದಾಗಿ ಬ್ಯಾಂಕ್ ಸಿಬ್ಬಂದಿಗಳು ಹೇಳಿದ್ದಾರೆ.

ಮನೆ ಮಾರಿ ಸಾಲ ಸಂದಿಸುವ ಬಗ್ಗೆ ಚಿಂತಿಸಿದ್ದೆ. ಅಷ್ಟೊತ್ತಿದೆ ನನ್ನ ಪತ್ನಿ ಮತ್ತು ಮಗಳು ಈ ರೀತಿಯ ಪ್ರಾಣಾಹುತಿ ಮಾಡಿಕೊಂಡಿರುವುದು ದಿಗಿಲು ಹುಟ್ಟಿಸಿದೆ ಎಂದು ಲೇಖಳ ಪತಿ ಹೇಳಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.