ಬೆಂಗಳೂರು: ಮೋಟರ್​ ವಾಹನ ಕಾಯ್ದೆ ತಿದ್ದುಪಡಿ 2019ರ ಪ್ರಕಾರ ಜಾರಿಗೆ ಬಂದ ಹೊಸ ಸಂಚಾರಿ ನಿಯಮದಿಂದಾಗಿ ಈಗಾಗಲೇ ಅನೇಕರು ದುಬಾರಿ ಮೊತ್ತದ ದಂಡ ಕಟ್ಟಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ದಂಡದ ಮೊತ್ತ ನೋಡಿಯೇ ಸ್ವಂತವಾಹನ ಚಾಲನೆ ಬಗ್ಗೆ ಯೋಚಿಸುವಂತಂಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಚಾರಿ ನಿಯಮ ಪಾಲಿಸದ ಸವಾರರು ಭಾರೀ ದಂಡ ತೆರಬೇಕಾಗಿದ್ದು, ಈಗಾಗಲೇ ಪೊಲೀಸರ ದಂಡಕ್ಕೆ ವಾಹನ ಸವಾರರು ಬೆಚ್ಚಿ ಬಿದ್ದಿದ್ದಾರೆ. ದೇಶದೆಲ್ಲೆಡೆ ಈ ನಿಯಮದಿಂದ ಜನರು ತತ್ತರಿಸಿದ್ದು, ವಾಹನ ಸವಾರರು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. ಅಲ್ಲದೇ ಸಂಚಾರಿ ನಿಯಮಕ್ಕೆ ಸಂಬಂಧಿಸಿದಂತೆ ಸವಾರರು ಮತ್ತು ಪೊಲೀಸರ ನಡುವೆ ವಾಗ್ವಾದಕ್ಕೆ ಕೂಡ ಕಾರಣವಾಗಿದೆ.

ಇದೇ ಹಿನ್ನೆಲೆಯಲ್ಲಿ ಈ ವಾಹನ ಸಂಚಾರ ನಿಯಮವನ್ನು ಬದಲಾವಣೆಗೆ ಈಗಾಗಲೇ ಗುಜರಾತ್​, ರಾಜಸ್ಥಾನ, ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಕೂಡ ಈ ಬಗ್ಗೆ ಚಿಂತನೆಗೆ ಮುಂದಾಗಿದ್ದು, ವಾಹನ ಸವಾರರಲ್ಲಿ ನಿಟ್ಟುಸಿರು ಬಿಡುವಂತೆ ಆಗಿದೆ.

ಈಗಾಗಲೇ ಈ ಸಂಬಂಧ ಸಾರಿಗೆ, ಗೃಹ ಇಲಾಖೆ ಉನ್ನತಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ವಾಹನ ಸವಾರರಿಗೆ ದಂಡದ ಹೊರೆ ಅಧಿಕವಾಗುತ್ತಿರುವ ಹಿನ್ನೆಲೆ ಈ ಬಗ್ಗೆ ಮಧ್ಯಮ ವರ್ಗದ ಕುಟುಂಬಗಳು ತತ್ತರಿಸಿದೆ. ಈ ಹಿನ್ನೆಲೆ ಅವರಿಗೆ ಆರ್ಥಿಕ ಹೊರೆ ಕಡಿಮೆ ಮಾಡುವುದು ಸರ್ಕಾರದ ಹೊಣೆಯಾಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಅಧಿಕಾರಿಗಳ ಸಭೆ ಕರೆದು ಶೇ.50ರಷ್ಟು ಕಡಿತಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.